ಬದಿಯಡ್ಕ: ಪ್ರತಿವರ್ಷದಂತೆ ಈ ಬಾರಿಯೂ ಓಣಂ ಹಬ್ಬದ ಪ್ರಯುಕ್ತ ಪೆರಡಾಲ ಸೇವಾಸಹಕಾರಿ ಬ್ಯಾಂಕ್‍ನಲ್ಲಿ ರಾಜ್ಯ ಸರ್ಕಾರದ ಓಣಂ ಮಾರುಕಟ್ಟೆಯನ್ನು ತೆರೆಯಲಾಯಿತು.
ಬ್ಯಾಂಕ್‍ನ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಗೃಹೋಪಯೋಗಿ ಸಾಮಾಗ್ರಿಗಳ ವಿತರಣೆಗೆ ಚಾಲನೆಯನ್ನು ನೀಡಿದರು. ನಿತ್ಯೋಪಯೋಗಿ ಸಾಮಾಗ್ರಿಗಳಾದ ಅಕ್ಕಿ, ಬೆಲ್ಲ, ಸಕ್ಕರೆ, ಬೇಳೆಕಾಳುಗಳು, ಎಣ್ಣೆ, ಅಡುಗೆ ಪದಾರ್ಥಗಳು ಗ್ರಾಹಕರಿಗೆ ಮಿತದರದಲ್ಲಿ ಲಭ್ಯವಿದ್ದು, ಊರವರಿಗೆ ಪ್ರಯೋಜನವನ್ನು ಪಡೆಯಬಹುದಾಗಿದೆ. ಆಡಳಿತ ಮಂಡಳಿಯ ನಿರ್ದೇಶಕರು, ಕಾರ್ಯದರ್ಶಿ, ನೌಕರರು ಜೊತೆಗಿದ್ದರು.





