ಕಾಸರಗೋಡು: ಕಾಸರಗೋಡು ಜಿಲ್ಲೆಯ ಜೈವಿಕ ವೈವಿಧ್ಯಕ್ಕೆ ಮಹತ್ವವಿರುವ ಪ್ರವಾಸಿ ತಾಣಗಳನ್ನು ಇಕೋ ಟೂರಿಸಂ ಯೋಜನೆಯಲ್ಲಿ ಅಳವಡಿಸಿ ಅಭಿವೃದ್ಧಿ ಪಡಿಸುವ ಸಂಬಂಧ ಪರಿಣತರ ತಂಡ 4 ತಾಣಗಳಿಗೆ ಭೇಟಿ ನೀಡಿದೆ. ಕಿದೂರು ಅಳಿವೆ, ರಾಣಿಪುರಂ, ಕೋಟಂಜೇರಿ ಪ್ರವಾಸಿ ತಾಣಗಳಿಗೆ ಭೇಟಿ ನಡೆಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಇಕೋ ಟೂರಿಸಂ ವಿಭಾಗ ಯೋಜನೆ ಕಾರ್ಯಕಾರಿ ಅಧಿಕಾರಿ ಟಿ. ಮನೋಜ್ ಕುಮಾರ್, ನೆನ್ಮಲ ಇಕೋ ಟೂರಿಸಂ ಅಭಿವೃದ್ಧಿ ಸೊಸೈಟಿ ಡೆಸ್ಟಿನೇಷನ್ ಮೆನೆಜರ್ ಪಿ.ಅರುಣ್ ಪ್ರಕಾಶ್, ನೆಮ್ನಲ ಇಕೋ ಟೂರಿಸಂ ಪ್ರಮೋಷನ್ ಸೊಸೈಟಿ ಹರಿತಂ ಪ್ರಾಜೆಕ್ಟ್ ಸಹಾಯಕ ಸಿ.ಯು.ಮನೀಷ್ ಪರಿಣತ ತಂಡದಲ್ಲಿದ್ದರು.
ಸಂದರ್ಶನದ ನಂತರ ನಡೆದ ಮಾತುಕತೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಥಾಮಸ್ ಆಂಟನಿ, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್, ಬಿ.ಆರ್.ಡಿ.ಸಿ. ಸಹಾಯಕ ಮೆನೆಜರ್ ಪಿ.ಸುನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪರಿಣತ ತಂಡ ತಮ್ಮ ವರದಿಯನ್ನು ಶೀಘ್ರದಲ್ಲೇ ಸರಕಾರಕ್ಕೆ ಸಲ್ಲಿಸಲಿದೆ.






