ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೋವಿಡ್ 19 ಸ್ಥಿತಿಗತಿ ಅರಿಯಲು ಕೇಂದ್ರ ತಂಡದ ಆಗಮಿಸಿದೆ.
ಕಾಞಂಗಾಡು ಎನ್.ಎಚ್.ಎಂ. ಕಚೇರಿಗೆ ಭೇಟಿ ನೀಡಿದ ತಂಡದೊಂದಿಗೆ ಅಲ್ಲಿನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದರು. ಕಾಸರಗೋಡು ಜಿಲ್ಲೆಯ ಕೋವಿಡ್ ಕೇಸ್ ಗಳು, ಪ್ರತಿರೋಧ ಚಟುವಟಿಕೆಗಳು, ಆಸ್ಪತ್ರೆ ಸೌಲಭ್ಯಗಳು, ಚಟುವಟಿಕೆಗಳು ಇತ್ಯಾದಿಗಳ ಮಾಹಿತಿ ನೀಡಲಾಯಿತು.
ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಾಲಯ ಸಲಹೆಗಾರರಾದ, ಡಿ.ಎಂ.ಸೆಲ್ ಮಾಜಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಡಾ.ಪಿ. ರವೀಂದ್ರನ್, ಕೋಯಿಕೋಡ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಡೀಷನಲ್ ಡೈರೆಕ್ಟರ್ ಡಾ.ಕೆ.ರಘು ತಂಡದಲ್ಲಿದ್ದಾರೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾ ಪೆÇ್ರೀಗ್ರಾಂ ಮೆನೆಜರ್ ಡಾ.ಎ.ವಿ.ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಕಂಟ್ರೊಲ್ ಸೆಲ್ ನೋಡೆಲ್ ಅಧಿಕಾರಿ ಡಾ.ಡಾಲ್ಮಿಟ್ಟ ನಿಯಾ ಜೇಮ್ಸ್ ಮಾತುಕತೆ ನಡೆಸಿದರು.
ಆನ್ ಲೈನ್ ಮೂಲಕ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಕೇಂದ್ರ ತಂಡ ಸಂವಾದ ನಡೆಸಿತು. ತದನಂತರ ಅಜಾನೂರು, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಗಳ ಕಂಟೈನ್ಮೆಂಟ್ ಝೋನ್ ಗಳಿಗೆ ತಂಡ ಭೇಟಿ ನೀಡಿ ಮರಳಿದೆ.





