HEALTH TIPS

ಲಸಿಕೆ ಬಳಿಕದ ಕೋವಿಡ್ ಸೋಂಕು ಪತ್ತೆ ಹಚ್ಚಲು ಕೇಂದ್ರದಿಂದ ಆನ್ಲೈನ್ ವೇದಿಕೆ

            ಅಹಮದಾಬಾದ್, ಆ. 12: ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಕೆಲವರಿಗೆ ಕೋವಿಡ್ ಸೋಂಕು ತಗಲುತ್ತಿರುವ ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿದೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಕೇಂದ್ರ ಸರಕಾರ ಮುಂದಿನ ವಾರ ಆನ್ಲೈನ್ ವೇದಿಕೆಯೊಂದನ್ನು ಅರಂಭಿಸಲು ಯೋಜಿಸಿದೆ. ಸಾರ್ವಜನಿಕ ಡೊಮೈನ್ ನಲ್ಲಿ ಲಭ್ಯವಾಗುವ ಈ ಆನ್ಲೈನ್ ವೇದಿಕೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಸೋಂಕಿಗೆ ಒಳಗಾದವರ, ಆಸ್ಪತ್ರೆಗೆ ದಾಖಲಾದವರ ಹಾಗೂ ಸಾವುಗಳ ಸಂಖ್ಯೆಯ ಮಾಹಿತಿ ನೀಡಲಿದೆ ಎಂದು ಅದು ತಿಳಿಸಿದೆ.

          ಕೋವಿಡ್ ಲಸಿಕೆಯ ಹೆಸರು, ಆರ್ಟಿ-ಪಿಸಿಆರ್ ವರದಿ ಹಾಗೂ ಸೋಂಕಿಗೆ ಒಳಗಾದವರ ಸ್ಥಿತಿಗತಿಯ ದತ್ತಾಂಶವನ್ನು ಈ ಆನ್ಲೈನ್ ವೇದಿಕೆ ಸಂಗ್ರಹಿಸಲಿದೆ ಎಂದು ಅದು ಹೇಳಿದೆ. ''ದೇಶಾದ್ಯಂತ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಸೋಂಕಿಗೊಳಗಾದವರ ಕುರಿತು ಈ ಆನ್ಲೈನ್ ವೇದಿಕೆ ವಿಶ್ಲೇಷಣೆ ನಡೆಸಲಿದೆ. ಹೀಗೆ ಸೋಂಕಿಗೊಳಗಾದವರ ಮಾದರಿಯನ್ನು ರಾಜ್ಯದಿಂದ ಕೋರಲಿದೆ. ಅಲ್ಲದೆ, ವೈರಸ್ ನ ಗಾತ್ರ, ಮಾದರಿ ಹಾಗೂ ನಡವಳಿಕೆ ಪತ್ತೆ ಹಚ್ಚಲು ಜೆನೋಮಿಕ್ ಸೀಕ್ವೆನ್ಸ್ ಮಾಡಲಿದೆ'' ಎಂದು ಕೇಂದ್ರ ಆರೋಯ ಸಚಿವಾಲಯದ ಮೂಲಗಳು ತಿಳಿಸಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries