HEALTH TIPS

ನಾವು ದೇಶವನ್ನು ಬದಲಿಸುತ್ತೇವೆ.. ಮಹಿಳೆಯರಿಗೆ ಕೆಲಸ, ಶಿಕ್ಷಣಕ್ಕೆ ಅವಕಾಶ: ತಾಲಿಬಾನ್

               ಕಾಬೂಲ್‌ನಾವು ಎಲ್ಲಾ ವಿಭಾಗಗಳನ್ನು ಒಳಗೊಂಡ ಸರ್ಕಾರ ಸ್ಥಾಪನೆ ಬಯಸುತ್ತಿದ್ದು, ಆಫ್ಘಾನಿಸ್ತಾನ ದೇಶವನ್ನು ಬದಲಿಸುತ್ತೇವೆ ಎಂದು ತಾಲಿಬಾನ್ ಹೇಳಿದೆ.

             ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿದ್ದು, ದೇಶವನ್ನು ಅಮೂಲಾಗ್ರವಾಗಿ ಬದಲಿಸಲು ನಾವು ಪಣತೊಟ್ಟಿದ್ದೇವೆ ಎಂದು ಹೇಳಿದೆ.

            ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್, 20 ವರ್ಷಗಳ ನಿರಂತರ ಹೋರಾಟದಿಂದ ನಾವು ನಮ್ಮ ದೇಶವನ್ನು ವಿಮೋಚನೆಗೊಳಿಸಿದ್ದೇವೆ. ನಮಗೆ ಆಂತರಿಕ ಅಥವಾ ಬಾಹ್ಯ ಶತ್ರುಗಳು ಬೇಕಿಲ್ಲ.. ನಾವು ಐತಿಹಾಸಿಕ ಘಟ್ಟವೊಂದರಲ್ಲಿ ಇದ್ದು, ನಾವು ಎಲ್ಲಾ ವಿಭಾಗಗಳನ್ನು ಒಳಗೊಂಡ ಸರ್ಕಾರ ಸ್ಥಾಪನೆ ಬಯಸುತ್ತಿದ್ದೇವೆ. ಆಫ್ಘಾನಿಸ್ತಾನ ದೇಶವನ್ನು ಖಂಡಿತಾ ಬದಲಿಸುತ್ತೇವೆ ಎಂದು ಹೇಳಿದರು.

           ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡುತ್ತೇವೆ. ನಾವು ನಮ್ಮ ಧಾರ್ಮಿಕ ನಿಯಮಗಳಂತೆ ನಡೆದುಕೊಳ್ಳುವ ಹಕ್ಕು ನಮಗಿದೆ. ತಾಲಿಬಾನ್‌ನ ಉಪ ಸಂಸ್ಥಾಪಕ ಮುಲ್ಲಾಹ್ ಅಬ್ದುಲ್ ಗನಿ ಬರಾದ‌ ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದು, ಈ ಹಿಂದೆ ನಮ್ಮ ವಿರುದ್ಧ ಹೋರಾಡಿದವರನ್ನೆಲ್ಲ ನಾವು ಸಾಮೂಹಿಕವಾಗಿ ಕ್ಷಮಿಸಿದ್ದೇವೆ. ಅಂತೆಯೇ ನಾವು ಎಲ್ಲಾ ವಿಭಾಗಗಳನ್ನು ಒಳಗೊಂಡ ಸರ್ಕಾರ ಸ್ಥಾಪನೆ ಬಯಸುತ್ತಿದ್ದು, ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ. ಇದು ಖಂಡಿತಾ ಧನಾತ್ಮಕ ಬದಲಾವಣೆಯಾಗಿರಲಿದೆ. ಪ್ರತಿಯೊಬ್ಬ ಆಫ್ಘನ್ ಪ್ರಜೆಯೂ ಉತ್ತಮ ಬದುಕು ನಡೆಸಲು ಬಯಸುತ್ತಾನೆಂದು ನಮಗೆ ತಿಳಿದಿದೆ. ನಮ್ಮ ದೇಶದ ಆರ್ಥಿಕತೆ ಬದಲಿಸಲು ಕೆಲವು ಮುಖ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

                                        ಮಹಿಳೆಯರಿಗೆ ಕೆಲಸ, ಶಿಕ್ಷಣಕ್ಕೆ ಅವಕಾಶ
             ಅಂತೆಯೇ ಷರಿಯಾ ನಿಯಮಗಳ ಅಡಿಯಲ್ಲಿ ಮಹಿಳೆಯರ ಹಕ್ಕುಗಳಿಗೆ ನಾವು ಕಟಿಬದ್ಧರಾಗಿದ್ದೇವೆ. ಮಹಿಳೆಯರು ಖಂಡಿತವಾಗಿಯೂ ಷರಿಯಾ ನಿಯಮಗಳಂತೆ ನಡೆದುಕೊಳ್ಳಬೇಕು. ನಾವು ಮಹಿಳೆಯರಿಗೆ ಕೆಲಸ ಮಾಡಲು, ಓದಲು ಅವಕಾಶ ನೀಡುತ್ತೇವೆ. ಆದರೆ ಇದು ಕಾರ್ಯಚಟುವಟಿಕೆಯ ವ್ಯಾಪ್ತಿಯಲ್ಲಿರಬೇಕು. ಸಮಾಜದಲ್ಲಿ ಮಹಿಳೆಯರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಅವರು ಷರಿಯಾ ನಿಯಮಗಳ ವ್ಯಾಪ್ತಿಯಲ್ಲಿರುತ್ತಾರೆ. ನಾವು ಅಫ್ಘಾನಿಸ್ತಾನದಲ್ಲಿ ಗಲಭೆ ಎಬ್ಬಿಸುತ್ತಿರುವ, ಲೂಟಿ ಹೊಡೆಯುತ್ತಿರುವವರನ್ನು ನಿಯಂತ್ರಿಸಬೇಕಿದೆ. ಅದಕ್ಕಾಗಿ ನಾವು ಈಗಾಗಲೇ ಆಪರೇಷನ್ ಕೂಡ ಪ್ರಾರಂಭಿಸಿದ್ದೇವೆ ಎಂದು ಮುಜಾಹಿದ್ ತಿಳಿಸಿದರು.

ಯಾವ ದೇಶವೂ ನಮ್ಮ ನೆಲವನ್ನು ಮತ್ತೊಂದು ದೇಶದ ವಿರುದ್ಧ ಹೋರಾಡಲು ಬಿಡುವುದಿಲ್ಲ
ನಾವು ನಮ್ಮ ನೆರೆಹೊರೆಯವರಿಗೆ ಮತ್ತು ಪ್ರಾದೇಶಿಕ ದೇಶಗಳಿಗೆ ನಮ್ಮ ಪ್ರದೇಶವನ್ನು ವಿಶ್ವದ ಯಾವುದೇ ದೇಶದ ವಿರುದ್ಧ ಬಳಸಲು ನಾವು ಅನುಮತಿಸುವುದಿಲ್ಲ ಎಂದು ಭರವಸೆ ನೀಡಲು ಬಯಸುತ್ತೇವೆ. ನಮ್ಮ ನೆಲದಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ರಾಜಧಾನಿ ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಗಳ ಭದ್ರತೆಯು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ. ಎಲ್ಲಾ ರಾಯಭಾರ ಕಚೇರಿಗಳು, ಕಾರ್ಯಾಚರಣೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ನೆರವು ಸಂಸ್ಥೆಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಡೆಗಳು ಇವೆ ಎಂದು ನಾವು ಎಲ್ಲಾ ವಿದೇಶಗಳಿಗೆ ಭರವಸೆ ನೀಡಲು ಬಯಸುತ್ತೇವೆ ಎಂದು ಹೇಳಿದರು.

                           90ರದಶಕದ ತಾಲಿಬಾನ್ ಗೂ ಹಾಲಿ ತಾಲಿಬಾನ್ ಗೂ ಇರುವ ವ್ಯತ್ಯಾಸ..?
               1990 ರ ತಾಲಿಬಾನ್ ಮತ್ತು ಇಂದಿನ ತಾಲಿಬಾನ್ ನಲ್ಲಿನ ವ್ಯತ್ಯಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರಾಗಿರುವುದರಿಂದ ಸಿದ್ಧಾಂತ ಮತ್ತು ನಂಬಿಕೆಗಳು ಒಂದೇ ಆಗಿವೆ, ಆದರೆ ಅನುಭವದ ವಿಷಯದಲ್ಲಿ ಬದಲಾವಣೆ ಇದೆ. ಅವರು ಹೆಚ್ಚು ಅನುಭವ ಹೊಂದಿದ್ದರೆ ನಾವು ವಿಭಿನ್ನ ದೃಷ್ಟಿಕೋನ ಹೊಂದಿದ್ದೇವೆ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries