ಕಾಸರಗೋಡು: ಕರ್ನಾಟಕ ಗಮಕಕಲಾ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ಹಾಗೂ ಸಿರಿಗನ್ನಡ ವೇದಿಕೆ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮ ಸರಣಿ ಆ.15 ರಿಂದ ಸ.3ರ ವರೆಗೆ ವಿವಿಧೆಡೆ ನಡೆಯಲಿದೆ.
ಸರಣಿಯ ಮೊದಲ ಕಾರ್ಯಕ್ರಮ ಆ.15 ಎರಂದು(ನಾಳೆ) ಹೊಸಂಗಡಿ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಚಾವಡಿಯಿಂದ ಚಾಲನೆಗೊಳ್ಳಲಿದೆ. ಬೆಳಿಗ್ಗೆ 10ಕ್ಕೆ ನಡೆಯಲಿರುವ ಸಮಾರಂಭವನ್ನು ಹಿರಿಯ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಉದ್ಘಾಟಿಸುವರು. ಗಮಕ ಕಲಾಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಟಿ.ಶಂಕರನಾರಾಯಣ ಬಟ್ ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಮುಖ್ಯ ಅತಿಥಿಗಳಾಗಿರುವರು. ಬಳಿಕ ಮಂದಾರ ರಾಮಾಯಣದ ಆಯ್ದ ಭಾಗಗಳ ವಾಚನ ವ್ಯಾಖ್ಯಾನ ನಡೆಯಲಿದ್ದು, ಶೇಖರ ಶೆಟ್ಟಿ ಬಾಯಾರು ವಾಚನ ಹಾಗೂ ಸಾಹಿತಿ, ಪತ್ರಕರ್ತ ಮಲಾರು ಜಯರಾಮ ರೈ ವ್ಯಾಖ್ಯಾನ ನಡೆಸುವರು.
ಆ|.18 ರಂದು ಶ್ರೀಮದ್ ಎಡನೀರು ಮಠದ ಆವರಣದಲ್ಲಿ ಅಪರಾಹ್ನ 4ಕ್ಕೆ ಎರಡನೇ ಕಾರ್ಯಕ್ರಮ ನಡೆಯಲಿದ್ದು, ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ಮಠದ ಕಾರ್ಯನಿರ್ವಾಹಕ ರಾಜೇಂದ್ರ ಕಲ್ಲೂರಾಯ ಮುಖದ್ಯ ಅತಿಥಿಗಳಾಗಿರುವರು. ವಿದ್ವಾನ್ ನೆತ್ತರುಗುಳಿ ತಿಮ್ಮಣ್ಣ ಭಟ್ ಕನ್ನಡಕ್ಕೆ ಅನುವಾದಿಸಿರುವ ರಾಮಚರಿತ ಮಾನಸದ ಆಯ್ದ ಭಾಗಗಳ ವಾಚನ ವ್ಯಾಖ್ಯಾನ ನಡೆಯಲಿದ್ದು ಶ್ರದ್ದಾ ಭಟ್-ಮೇಧಾ ಭಟ್ ನಾಯರ್ಪಳ್ಳ ಸಹೋದರಿಯರು ನಿರ್ವಹಿಸುವರು.





