ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮವಿಠಲ ದೇವಳ ಹಾಗೂ ನಾಗಸನ್ನಿಧಿಯಲ್ಲಿ ನಾಗರಪಂಚಮಿಯ ಪ್ರಯುಕ್ತ ವಿಶೇಷ ಸೇವೆಗಳು ನೆರವೇರಿದವು.
ಕ್ಷೇತ್ರದ ಮೊಕ್ತೇಸರ ಎಸ್.ವಾಸುದೇವ ಭಟ್ ನೇತೃತ್ವದಲ್ಲಿ ಪುರೋಹಿತರಾದ ಲಕ್ಷ್ಮೀಶ ವಿ ಮತ್ತು ಶಿವರಾಜ್ ಸಹಭಾಗಿತ್ವದಲ್ಲಿ, ಉಷಃಕಾಲ ಪೂಜೆ ಸಹಿತ ವಿವಿಧ ವಿಧಿವಿಧಾನಗಳು ನಡೆಯಿತು. ನಾಗವನದಲ್ಲಿ ಕ್ಷೀರ, ದಧಿ, ಘೃತ, ಮಧು, ಶರ್ಕರಗಳ ಪಂಚಾಮೃತಾಭಿಷೇಕ, ತನು ಅರ್ಪಣೆ ನಡೆಯಿತು.





