ನವದೆಹಲಿ: ಆಧಾರ್ ಕಾರ್ಡ್ ಭಾರತೀಯ ಪ್ರಜೆ ಹೊಂದಿರಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ನಲ್ಲಿ ನೀಡಿರುವ ಮಾಹಿತಿಯನ್ನು ಬದಲಾಯಿಸಲು, ಯುಐಡಿಎಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಈ ಹಿಂದೆ, ಆಧಾರ್ ಕಾರ್ಡ್‍ನಲ್ಲಿ ವಿಳಾಸವನ್ನು ನವೀಕರಿಸಲು ದಾಖಲೆಗಳ ಅಗತ್ಯವಿಲ್ಲ ಎಂದು ಸೂಚಿಸಲಾಗಿತ್ತು. ಆದಾಗ್ಯೂ, ಹೊಸ ಆಧಾರ್ ಮಾರ್ಗಸೂಚಿಗಳ ಅಡಿಯಲ್ಲಿ, ಆಧಾರ್‍ಗೆ ಹೊಸ ವಿಳಾಸವನ್ನು ಸರಿಪಡಿಸಲು ಅಥವಾ ಸೇರಿಸಲು ಇತರ ಗುರುತಿನ ದಾಖಲೆಗಳು ಅಗತ್ಯವಿದೆ.
ವಿಳಾಸವನ್ನು ಸರಿಪಡಿಸಲು ಮಾಡಬೇಕಾದ ಅಗತ್ಯಗಳು:
1. ಯುಐಡಿಎಐ ನ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ
2. 'ನನ್ನ ಆಧಾರ್' ವಿಭಾಗದಲ್ಲಿ 'ಆಧಾರ್ ನ್ನು ನವೀಕರಿಸಿ' ಕ್ಲಿಕ್ ಮಾಡಿ
3. ತೆರೆಯುವ ಪೋರ್ಟಲ್‍ನಿಂದ 'ಆಧಾರ್ ಅಪ್‍ಡೇಟ್ ಮಾಡಲು ಮುಂದುವರಿಯಿರಿ' ಆಯ್ಕೆಮಾಡಿ.
4. ಆಧಾರ್‍ನಲ್ಲಿ ಮಾಹಿತಿಯನ್ನು ನಮೂದಿಸಿ ಮತ್ತು ಪರಿಶೀಲನೆಗಾಗಿ ಕಾಯಿರಿ
5. ಹೊಸ ವಿಳಾಸ ಮತ್ತು ಅಗತ್ಯ ಮಾಹಿತಿಯನ್ನು ನಮೂದಿಸಿ
6. ಅಂತಿಮವಾಗಿ ಯುಐಡಿಎಐ ಅಧಿಕೃತವಾಗಿ ಅನುಮೋದಿಸಿದ 32 ದಾಖಲೆಗಳಲ್ಲಿ ಯಾವುದನ್ನಾದರೂ ಒಂದನ್ನು ಅಪೆÇ್ಲೀಡ್ ಮಾಡಿ.
ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಪಡಿತರ ಚೀಟಿ, ವೋಟರ್ ಐಡಿ ಮತ್ತು ಚಾಲನಾ ಪರವಾನಗಿ ಯುಐಡಿಎಐ ಅನುಮೋದಿಸಿದ ದಾಖಲೆಗಳಾಗಿವೆ.

