HEALTH TIPS

ಜೀವನಮಟ್ಟ ಸುಧಾರಿಸಿದರೆ ಮನುಷ್ಯರು 130 ವರ್ಷಗಳವರೆಗೂ ಬದುಕಬಹುದು; ಅಧ್ಯಯನ

                ಇಟಲಿ: ಆರೋಗ್ಯ ವ್ಯವಸ್ಥೆ ಹಾಗೂ ಜೀವನಮಟ್ಟ ಸುಧಾರಿಸಿದರೆ ಮನುಷ್ಯರು 130 ವರ್ಷಗಳವರೆಗೂ ಬದುಕಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

            ರಾಯಲ್ ಸೊಸೈಟಿ ಓಪನ್ ಸೈನ್ಸ್ ನಿಯತಕಾಲಿಕೆಯಲ್ಲಿ ಸಂಶೋಧಕರ ತಂಡ ಈ ಅಂಶದ ಕುರಿತು ಪ್ರಸ್ತಾಪಿಸಿದ್ದು, 108ನೇ ವಯಸ್ಸಿನಿಂದ ಬದುಕುವ ಸಂಭವನೀಯತೆ ಪ್ರತಿ ಹೆಚ್ಚುವರಿ ವರ್ಷ 50-50 ಇರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅದಾಗ್ಯೂ ಸುಧಾರಿತ ಜೀವನ ಮಟ್ಟದೊಂದಿಗೆ ಒಬ್ಬ ವ್ಯಕ್ತಿ 130 ವರ್ಷಗಳವರೆಗೂ ಬದುಕಬಹುದಾಗಿದೆ ಎಂದು ಸಂಶೋಧನೆ ತಿಳಿಸಿದೆ.

             ಸುಮಾರು 130 ವರ್ಷಗಳವರೆಗೂ ಮಾನವನ ಜೀವಿತಾವಧಿ ಗರಿಷ್ಠವಿದೆ ಎಂಬುದಕ್ಕೆ ಬಲವಾದ ಪುರಾವೆಗಳು ದೊರೆತಿವೆ. ಪ್ರಸ್ತುತ ಶತಮಾನದಲ್ಲಿ ಸಾವಿನ ಗರಿಷ್ಠ ವಯಸ್ಸು 130 ವರ್ಷಗಳಿಗೆ ಏರಿಕೆಯಾಗುವಂತೆ ಹಲವು ಅಂಶಗಳು ಪ್ರಭಾವ ಬೀರಲಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.


          ಮಾನವನ ಜೀವಿತಾವಧಿಗೆ ಯಾವುದೇ ಮಿತಿಯಿಲ್ಲ ಎಂಬುದನ್ನೂ ಸಂಶೋಧನೆ ಹೇಳಿದೆ. ಶತಾಯುಷಿಗಳ ಮೇಲೆ ನಡೆಸಿದ ಅಧ್ಯಯನಗಳಿಂದ ಈ ಅಂಶಗಳನ್ನು ಕಂಡುಕೊಳ್ಳಲಾಗಿದೆ.

ಆರಂಭಿಕ ವಿಶ್ಲೇಷಣೆಯಲ್ಲಿ, ಸಂಶೋಧನಾ ತಂಡವು ದೀರ್ಘಾಯುಷ್ಯದ ಕುರಿತಾದ ಅಂತರರಾಷ್ಟ್ರೀಯ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ. 13 ದೇಶಗಳ 1100ಕ್ಕಿಂತ ಹೆಚ್ಚಿನ ಶತಾಯುಷಿಗಳನ್ನು ಸಂಪರ್ಕಿಸಲಾಗಿದೆ. ನಂತರ ಸಂಶೋಧಕರು ಇಟಲಿಯಲ್ಲಿ ಜನವರಿ 2009 ರಿಂದ ಡಿಸೆಂಬರ್ 2015ರ ನಡುವೆ ಕನಿಷ್ಠ 105 ವಯಸ್ಸಿನ ಪ್ರತಿಯೊಬ್ಬರ ಮಾಹಿತಿಯನ್ನು ವಿಶ್ಲೇಷಣೆ ನಡೆಸಿ ಹಲವು ಅಂಶಗಳನ್ನು ಕಂಡುಕೊಂಡಿದೆ.

             ಉತ್ತಮ ಜೀವನ ಮಟ್ಟವಿದ್ದರೆ ಹೆಚ್ಚಿನ ಜನರು 130 ವರ್ಷದವರೆಗೂ ಬದುಕುವ ಸಾಧ್ಯತೆಯಿದೆ ಎಂದು ಈ ವಿಶ್ಲೇಷಣೆಗಳಿಂದ ಕಂಡುಕೊಳ್ಳಲಾಗಿದೆ. ಈ ಶತಮಾನದಲ್ಲಿ ಹೆಚ್ಚಿನ ಜನರು ಶತಾಯುಷಿಗಳಾಗುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

            ಪ್ರಸ್ತುತ ದಾಖಲೆಯಂತೆ, ಪ್ರಪಂಚದಲ್ಲೇ ಅತ್ಯಂತ ಹಿರಿಯ ವ್ಯಕ್ತಿ ಫ್ರೆಂಚ್ ಮಹಿಳೆ ಜೀನ್ ಕಾಲ್ಮೆಂಟ್ ಆಗಿದ್ದು, ಅವರು 1997ರಲ್ಲಿ ನಿಧನರಾಗುವ ಸಮಯ ಅವರಿಗೆ 122 ವಯಸ್ಸಾಗಿತ್ತು. ಕಾಲ್ಮೆಂಟ್‌ ಅವರ ವಯಸ್ಸಿನ ಕುರಿತು ಕೆಲವು ವಿವಾದಗಳು ಉಂಟಾಗಿದ್ದು, ಕೊನೆಗೆ ಅವರು ಸಾಯುವಾಗ ಅವರಿಗೆ 122 ವರ್ಷವಾಗಿತ್ತು ಎಂಬುದು ಸಾಬೀತಾಗಿತ್ತು.

             ಜಪಾನ್‌ನ ಕೇನ್ ಟನಾಕಾ, 118 ವರ್ಷದವರೆಗೂ ಬದುಕಿದ್ದು, ದೀರ್ಘಕಾಲ ಬದುಕಿದವರಲ್ಲಿ ಒಬ್ಬರೆನಿಸಿಕೊಂಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries