HEALTH TIPS

ರಾಜ್ಯದಲ್ಲಿ ಇಂದು 15,914 ಮಂದಿಗೆ ಸೋಂಕು ಪತ್ತೆ: 16,758 ಮಂದಿ ಜನರು ಗುಣಮುಖ

                    ತಿರುವನಂತಪುರಂ: ಕೇರಳದಲ್ಲಿ ಇಂದು 15,914 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 2332, ತ್ರಿಶೂರ್ 1918, ತಿರುವನಂತಪುರ 1855, ಕೋಝಿಕ್ಕೋಡ್ 1360, ಕೊಟ್ಟಾಯಂ 1259, ಆಲಪ್ಪುಳ 1120, ಕೊಲ್ಲಂ 1078, ಮಲಪ್ಪುರಂ 942, ಪಾಲಕ್ಕಾಡ್ 888, ಪತ್ತನಂತಿಟ್ಟ 872, ಕಣ್ಣೂರು 799, ಇಡುಕ್ಕಿ 662, ವಯನಾಡ್ 566 ಮತ್ತು ಕಾಸರಗೋಡು 263 ಎಂಬಂತೆ ಸೋಂಕು ದೃಢಪಟ್ಟಿದೆ. 

                 ಕಳೆದ 24 ಗಂಟೆಗಳಲ್ಲಿ 1,03,871 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ 10 ಕ್ಕಿಂತ ಹೆಚ್ಚಿನ 368 ಸ್ಥಳೀಯ ಸಂಸ್ಥೆಗಳಲ್ಲಿ 745 ವಾರ್ಡ್‍ಗಳನ್ನು ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.

                ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,46,818 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,27,935 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದು, 18,883 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1204 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

               ಪ್ರಸ್ತುತ 1,42,529 ಕೋವಿಡ್ ಪ್ರಕರಣಗಳಲ್ಲಿ ಕೇವಲ 12 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ  25,087 ಕ್ಕೆ ಏರಿಕೆಯಾಗಿದೆ. 

                ಇಂದು, ಸೋಂಕು ಪತ್ತೆಯಾದವರಲ್ಲಿ 74 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ ಒಟ್ಟು 15,073 ಮಂದಿ ಜನರಿಗೆ ಸೋಂಕು ತಗುಲಿದೆ. 691 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 76 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. 

                 ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 16,758 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 948, ಕೊಲ್ಲಂ 172, ಪತ್ತನಂತಿಟ್ಟ 976, ಆಲಪ್ಪುಳ 1010, ಕೊಟ್ಟಾಯಂ 1355, ಇಡುಕ್ಕಿ 502, ಎರ್ನಾಕುಳಂ 2474, ತ್ರಿಶೂರ್ 2572, ಪಾಲಕ್ಕಾಡ್ 919, ಮಲಪ್ಪುರಂ 1440, ಕೋಝಿಕ್ಕೋಡ್ 1955, ವಯನಾಡ್ 574, ಕಣ್ಣೂರು 912 ಮತ್ತು ಕಾಸರಗೋಡು 949 ಗುಣಮುಖರಾಗಿದ್ದಾರೆ. ಇದರೊಂದಿಗೆ, 1,42,529 ಮಂದಿ ಜನರು ಸೋಂಕಿನಿಂದ  ಬಳಲುತ್ತಿದ್ದಾರೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 45,12,662 ಮಂದಿ ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries