HEALTH TIPS

ಕೋವಿಡ್-19 ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಐದು ವರ್ಷ ಜೈಲು ಶಿಕ್ಷೆ!!

             ಹನೋಯ್ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದ್ದ ವ್ಯಕ್ತಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿರುವ ಘಟನೆ ವಿಯೆಟ್ನಾಂ ನಲ್ಲಿ ನಡೆದಿದೆ.

          ಈ ಬಗ್ಗೆ ವಿಯೆಟ್ನಾಂ ಸ್ಥಳೀಯ ಪೀಪಲ್ಸ್ ಕೋರ್ಟ್‌ನ ವೆಬ್‌ಸೈಟ್‌ನ ವರದಿ ಮಾಡಿದ್ದು, ಲೆ ವಾನ್ ಟ್ರೈ ಎಂಬ ವ್ಯಕ್ತಿ ಜುಲೈನಲ್ಲಿ ಕೊರೊನಾವೈರಸ್ ಹಾಟ್‌ಸ್ಪಾಟ್ ಹೋ ಚಿ ಮಿನ್ಹ್ ನಗರದಿಂದ ತನ್ನ ತವರು ಪ್ರಾಂತ್ಯವಾದ ಕಾ ಮೌಗೆ ಪ್ರಯಾಣಿಸಿದ್ದರು. ಆದರೆ ಇಲ್ಲಿ ಕೋವಿಡ್ ಸಾಂಕ್ರಾಮಿಕ ಕಡಿಮೆ ಇದ್ದು, ಬೇರೆ ಪ್ರಾಂತ್ಯಗಳಿಂದ ಆಗಮಿಸುವವರಿಗೆ ಇಲ್ಲಿ 21 ದಿನಗಳ ಕ್ವಾರಂಟೈನ್ ನಿಯಮ ವಿಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ನಗರದಲ್ಲಿ ತಿರುಗಾಡಿದ ಆರೋಪದ ಮೇರೆಗೆ ಲೆ ವಾನ್ ಟ್ರೈ ಗೆ ಕೋರ್ಟ್ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

          ಈತ ಇತರ ಜನರಿಗೆ ಅಪಾಯಕಾರಿ ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಕೋರ್ಟ್ 28 ವರ್ಷದ ಲೆ ವಾನ್ ಟ್ರೈಗೆ ಶಿಕ್ಷೆ ವಿಧಿಸಿದೆ.

           ಈ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿರುವ ಸ್ಛಳೀಯ ಆಡಳಿತ ಹೋಮ್ ವೈದ್ಯಕೀಯ ಕ್ವಾರಂಟೈನ್ ನಿಯಂತ್ರಣವನ್ನು ಟ್ರೈ ಉಲ್ಲಂಘಿಸಿದ್ದರಿಂದ ಅನೇಕ ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಒಬ್ಬ ವ್ಯಕ್ತಿ 7 ಆಗಸ್ಟ್ 2021 ರಂದು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಆರೋಪಿಸಿತ್ತು. ಅಲ್ಲದೆ ಟ್ರೈ ಕಾರಣದಿಂದಾಗಿಯೇ ಎಂಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿತ್ತು. ಹೀಗಾಗಿ ಈ ಎಲ್ಲ ಗಂಭೀರ ಆರೋಪಗಳ ಮೇರೆಗೆ ಟೈಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ,

          ಇನ್ನು ವಿಯೆಟ್ನಾಂ ಅತ್ಯಂತ ಗಂಭೀರವಾದ ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇಲ್ಲಿ ಸುಮಾರು 540,000 ಸೋಂಕು ಪ್ರಕರಣಗಳು ಮತ್ತು 13,000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ.

          ಏಪ್ರಿಲ್ ಅಂತ್ಯದಿಂದ ಬಹುಪಾಲು ಸೋಂಕುಗಳು ಮತ್ತು ಸಾವುಗಳು ವರದಿಯಾಗಿವೆ. ವಿಯೆಟ್ನಾಂನ ರಾಜಧಾನಿ ಹನೋಯಿ ಮತ್ತು ವಾಣಿಜ್ಯ ಕೇಂದ್ರ ಹೋ ಚಿ ಮಿನ್ಹ್ ನಗರವು ಕಳೆದ ಕೆಲವು ತಿಂಗಳುಗಳಿಂದ ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries