HEALTH TIPS

ಮೇ 1 ರಿಂದ ಕೇರಳದಲ್ಲಿ ಯಾವುದೇ ನೋಕು ಕೂಲಿ ಇಲ್ಲ: ಸಿಎಂ ಅವರ ಹಳೆಯ ಪೋಸ್ಟ್ ಟ್ರೋಲ್ ಮಾಡಿದ ಸಾಮಾಜಿಕ ಮಾಧ್ಯಮ

                                    

                ತಿರುವನಂತಪುರಂ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಉಪಕರಣಗಳನ್ನು ಸಾಗಿಸುತ್ತಿದ್ದ ಇಸ್ರೋ ವಾಹನವನ್ನು ಕಾರ್ಮಿಕರು ತಡೆದ ಘಟನೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಳೆಯ ಫೇಸ್ ಬುಕ್ ಪೋಸ್ಟ್ ನ್ನು ಜಾಲತಾಣದಲ್ಲಿ ಗೇಲಿ ಮಾಡುತ್ತಿದ್ದಾರೆ.

                          ಹಾಸ್ಯಾಸ್ಪದ ಕಾಮೆಂಟ್‍ಗಳನ್ನು ಮುಖ್ಯಮಂತ್ರಿಗಳು 2018 ರಲ್ಲಿ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಪೋಸ್ಟ್ ಕೆಳಗೆ ನೀಡಲಾಗಿದೆ. ಮುಖ್ಯಮಂತ್ರಿಯವರ ಫೇಸ್ ಬುಕ್ ಪೋಸ್ಟ್ ಪ್ರಕಾರ, ಕೇಂದ್ರ ಟ್ರೇಡ್ ಯೂನಿಯನ್ ಗಳು ಮೇ 1 ರಿಂದ ಕೇರಳದಲ್ಲಿ ನೋಕುಕೂಲಿ(ತಲೆಹೊರೆಯಂತಹ ಕಾರ್ಮಿಕರಿಗೆ ಕೇರಳದಲ್ಲಿ ಮಾತ್ರ ಜಾರಿಯಲ್ಲಿರುವ ಒಂದು ಕೂಲಿ ವ್ಯವಸ್ಥೆ) ವ್ಯವಸ್ಥೆಯನ್ನು ಕೊನೆಗೊಳಿಸುವ ಸರ್ಕಾರದ ನಿರ್ಧಾರಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿವೆ. ಆದರೆ ಅದರ ನಂತರವೂ ನೋಕು ಕೂಲಿ ವ್ಯವಸ್ಥೆಯು ಕೇರಳದಲ್ಲಿ ಬದಲಾಗದೆ ಉಳಿಯಿತು. ಆ ಬಳಿಕ ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

                     ಕೇರಳದ ಹಲವು ಭಾಗಗಳಲ್ಲಿ, ವ್ಯಾಪಾರಿಗಳು ಮತ್ತು ಜನರಿಂದ ವಿಪರೀತ ಸರಕು ದರಗಳನ್ನು ವಿಧಿಸುವ ಹಾಗೂ ಅವರನ್ನು ಬಲವಂತವಾಗಿ ನೋಡಿಕೊಳ್ಳುವ ಪದ್ಧತಿ ಇದೆ. ನೋಕು ಕೂಲಿ ಪಾವತಿಗೆ ಸಂಬಂಧಿಸಿದಂತೆ ಕೇರಳದ ಬೀದಿಗಳಲ್ಲಿ ಪ್ರತಿನಿತ್ಯ ಅನೇಕ ವಿವಾದಗಳು ಮತ್ತು ಜಗಳಗಳು ನಡೆಯುತ್ತಿದ್ದವು. ಆಗಾಗ ಸರ್ಕಾರ ಮೌನ ವಹಿಸಿ ಕೂಲಿ ಕಾರ್ಮಿಕರ ರಕ್ಷಕದಂತೆ ವರ್ತಿಸಿದೆ. 

                 ಸರಕುಗಳನ್ನು ಇಳಿಸಲು 10 ಲಕ್ಷ ರೂ.ಗೆ ಬೇಡಿಕೆ ಸಲ್ಲಿಸಿ ಕಾರ್ಮಿಕರು 2018 ರ ಮೇ 1 ರ ಭಾನುವಾರ ಮಧ್ಯಾಹ್ನ ವಾಹನ ನಿಲ್ಲಿಸಿದರು. ವಾಹನವು ಒಟ್ಟು 184 ಟನ್ ಭಾರವನ್ನು ಹೊಂದಿತ್ತು. ಪ್ರತಿ ಟನ್‍ಗೆ 2,000 ರೂ.ಗಳ ನಿರ್ವಹಣಾ ವೇತನ ನೀಡಲು ಕಾರ್ಮಿಕರು ಒತ್ತಾಯಿಸಿದರು. ವಾಹನವು 7.5 ಮೀಟರ್ ಎತ್ತರ ಮತ್ತು 96 ಚಕ್ರಗಳನ್ನು ಹೊಂದಿದೆ. ಇಸ್ರೋ ವಿಂಡ್ ಟನಲ್ ಯೋಜನೆಗೆ ಅಗತ್ಯವಾದ ಭಾರೀ ಸಲಕರಣೆಗಳನ್ನು ಹೊತ್ತ ವಾಹನ ಮುಂಬೈನಿಂದ ಆಗಮಿಸಿತ್ತು. 

               ಹೈಕೋರ್ಟ್ ಶನಿವಾರ(ಸೆ.4) ನೋಕು ಕೂಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ನೋಕು ಕೂಲಿ ಕೇರಳದ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡುತ್ತದೆ. ನೋಕು ಕೂಲಿ ಕೇರಳದ ಘನತೆಗೆ ಧಕ್ಕೆ ತರುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries