ಚೆನ್ನೈ:ತಮಿಳುನಾಡಿನಲ್ಲಿ ಸುಮಾರು 1 ವರ್ಷಗಳ ಬಳಿಕ ಸೆಪ್ಟಂಬರ್ 1ರಂದು ಶಾಲೆ ಆರಂಭಿಸಲಾಗಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಗೂ 10 ಮಂದಿ ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದೆ.
ಕೋವಿಡ್ ಸೋಂಕಿನ ಈ ಪ್ರಕರಣಗಳು ಸೆಪ್ಟಂಬರ್ 3ರಂದು ವರದಿಯಾಗಿದೆ. ಇತ್ತೀಚೆಗಿನ ಪ್ರಕರಣಗಳು ಚೆನ್ನೈಯ ಖಾಸಗಿ ಶಾಲೆಯಿಂದ ವರದಿಯಾಗಿದೆ.
ಇತ್ತೀಚೆಗೆ ಬೆಂಗಳೂರಿಗೆ ತೆರಳಿದ್ದ ಈ ಬಾಲಕ ಹಾಗೂ ಆತನ ಹೆತ್ತವರ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ಈ ಶಾಲೆಯ ಇತರ ಸುಮಾರು 120 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
''ಯಾವುದೇ ಶಾಲೆಯಲ್ಲಿ ಶಿಕ್ಷಕರು ಅಥವಾ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದ್ದರೆ, ಅಂತಹ ಸಂಸ್ಥೆಗಳನ್ನು ಕೂಡಲೇ ಮುಚ್ಚಲಾಗುವುದು. ಸ್ಯಾನಿಟೈಸೇಶನ್ ಹಾಗೂ ಇತರ ಪ್ರಮಾಣಿತ ಕಾರ್ಯ ವಿಧಾನವನ್ನು ಅನುಸರಿಸಲಾಗುವುದು. ಕೋವಿಡ್ ಸೋಂಕಿಗೆ ಒಳಗಾದವರಿಗೆ ಕೂಡಲೇ ವೈದ್ಯಕೀಯ ನೆರವು ನೀಡಲಾಗುವುದು. ರಾಜ್ಯಾದ್ಯಂತ ಯಾದೃಚ್ಛಿಕ ಕೋವಿಡ್ ಪರೀಕ್ಷೆ ನಡೆಸಲಾಗುವುದು'' ಎಂದು ರಾಜ್ಯ ಆರೋಗ್ಯ ಸಚಿವ ಎಂಎ ಸುಬ್ರಹ್ಮಣೀಯನ್ ತಿಳಿಸಿದ್ದಾರೆ.





