ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರ ವೇಳೆಗೆ ವಿಶ್ವದ 13 ನಾಯಕರಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ ಎಂದು ಅಮೆರಿಕದ ಮೂಲದ 'ಮಾರ್ನಿಂಗ್ ಕನ್ಸಲ್ಟ್' ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಮಾರ್ನಿಂಗ್ ಕನ್ಸಲ್ಟ್ ತನ್ನ ರಾಜಕೀಯ ಗುಪ್ತಚರ ಘಟಕದ ಮೂಲಕ ಸಂಗ್ರಹಿಸಿದ ದತ್ತಾಂಶವು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರನ್ನು ಹಿಂದಿಕ್ಕಿ ಮೋದಿಯವರ ಜನಪ್ರಿಯತೆಯ ರೇಟಿಂಗ್ ಆಗಸ್ಟ್ 31 ರಂದು 70 ಪ್ರತಿಶತಕ್ಕೆ ಏರಿದೆ ಎಂದು ತೋರಿಸಿದೆ.
ದೇಶದಾದ್ಯಂತದ ಕೋವಿಡ್ -19 ಅಲೆ ಅಬ್ಬರದ ನಡುವೆ ಮೋದಿಯವರ ಜನಪ್ರಿಯತೆ ಕುಸಿದ ತಿಂಗಳ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಮೇ ತಿಂಗಳಲ್ಲಿ ಅವರನ್ನು ಒಪ್ಪುವವರ ರೇಟಿಂಗ್‌ಗಳು ಶೇಕಡಾ 63 ಕ್ಕೆ ಇಳಿದಿದ್ದವು,.
ವಾರದ ಸಮೀಕ್ಷೆಯ ಪ್ರಕಾರ ಸೆಪ್ಟೆಂಬರ್ 2 ರಂದು ಮೋದಿಯವರನ್ನು ಒಪ್ಪದವರ ರೇಟಿಂಗ್‌ಗಳು 25 ಪ್ರತಿಶತಕ್ಕೆ ಇಳಿದಿವೆ. ಸಮೀಕ್ಷೆಯು ಸುಮಾರು 2,126 ವಯಸ್ಕರ ಆನ್‌ಲೈನ್ ಸಂದರ್ಶನಗಳನ್ನು ಒಳಗೊಂಡಿದೆ.





