ಕಾಸರಗೋಡು: ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮದ ನವೀಕೃತ ಕಚೇರಿ ಉದ್ಘಾಟನೆ ಮತ್ತು ಸಾಲವಿತರಣೆ ಕಾರ್ಯಕ್ರಮ ಜರುಗಿತು.
ಕೆ.ಎಸ್.ಬಿ.ಸಿ.ಡಿ.ಸಿ. ಅಧ್ಯಕ್ಷ ಟಿ.ಕೆ.ಸುರೇಶ್ ಉದ್ಘಾಟಿಸಿದರು. ಆಡಳಿತೆ ನಿರ್ದೇಶಕ ಕೆ.ಟಿ.ಬಾಲಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಾಲ ಯೋಜನೆಗಳಿಗಾಗಿ ಸುಮಾರು 50 ಕೋಟಿ ರೂ.ನ ವಿತರಣೆ ನಡೆಸಲಾಗಿದೆ. ಒ.ಬಿ.ಸಿ. ಜನಾಂಗದ, ಮತೀಯ ಅಲ್ಪಸಂಖ್ಯಾತ ಜನಾಂಗಗಳಿಗೆ ಆರ್ಥಿಕ, ಶಿಕ್ಷಣ, ಸಾಮಾಜಿಕ ಅಭಿವೃದ್ಧಿ, ಸ್ವ ಉದ್ಯೋಗ, ಮೈಕ್ರೋ ಫೈನಾನ್ಸ್ ಸಹಿತ ವಿವಿಧ ಯೋಜನೆಗಳಿಗಾಗಿ ಸಾಲ ವಿತರಿಸಲಾಗಿದೆ.





