ಪತ್ತನಂತಿಟ್ಟ: ಶಬರಿಮಲೆ ದರ್ಶನಕ್ಕಾಗಿ ವರ್ಚುವಲ್ ಕ್ಯೂನಲ್ಲಿ ಬುಕಿಂಗ್ ಮಾಡಲು ಶುಲ್ಕ ವಿಧಿಸುವ ಯೋಜನೆ ಇದೆ. ದರ್ಶನ ಕಾಯ್ದಿರಿಸಿದವರಿಗೆ ಮರುಪಾವತಿ ಪಡೆಯುವ ಮಾರ್ಗವನ್ನು ದೇವಸ್ವಂ ಮಂಡಳಿ ಪರಿಗಣಿಸುತ್ತಿದೆ. ತಿರುವಾಂಕೂರು ದೇವಸ್ವಂ ಅಧಿಕಾರಿಗಳು ವರ್ಚುವಲ್ ಕ್ಯೂಗಾಗಿ ಬುಕಿಂಗ್ ಮಾಡಿದರೂ, ಅನೇಕರು ಭೇಟಿಗೆ ಬರುತ್ತಿಲ್ಲ ಎಂದು ಹೇಳಿರುವರು.
ನಿರ್ಧಾರ ಅಂತಿಮವಾದರೆ, ಮುಂದಿನ ಮಂಡಲ ಕಾಲ ಪೂಜೆಯಿಂದ ಜಾರಿಗೊಳಿಸಲಾಗುವುದು ಎಂದು ತಿಳಿದುಬಂದಿದೆ. ಕಳೆದ ತಿಂಗಳ ಪೂಜೆಗೆ ಬುಕ್ ಮಾಡಿದವರಲ್ಲಿ 6,772 ಮಂದಿ ಜನರು ಭೇಟಿ ನೀಡಿರÀಲಿಲ್ಲ. ಇದರೊಂದಿಗೆ, ಶುಲ್ಕವನ್ನು ವ್ಯವಸ್ಥೆ ಮಾಡುವ ಆಲೋಚನೆಯು ಸಕ್ರಿಯವಾಗಿದೆ. ದರ್ಶನಕ್ಕೆ ಹಾಜರಾಗದವರು ಹಣವನ್ನು ಕಳೆದುಕೊಳ್ಳುತ್ತಾರೆ ಮತ್ತು ಈ ಮೊತ್ತವು ದೇವಸ್ವಂ ಮಂಡಳಿಗೆ ಹೋಗುತ್ತದೆ. ಆದಾಗ್ಯೂ, ಭೇಟಿಯನ್ನು ಕಾಯ್ದಿರಿಸಿದವರಿಗೆ, ಶುಲ್ಕವನ್ನು ಆನ್‍ಲೈನ್‍ನಲ್ಲಿ ಮರುಪಾವತಿಸಲಾಗುತ್ತದೆ.
ಗುಂಪು ಬುಕಿಂಗ್ ಮತ್ತು ಭೇಟಿಗೆ ಹಾಜರಾಗದ ಕಾರಣ, ಅನೇಕ ಉದ್ದೇಶಿತ ಸಂದರ್ಶಕರ ಅವಕಾಶ ಕಳೆದುಹೋಗುತ್ತದೆ ಎಂಬ ನೆಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ನಿಲಕ್ಕಲ್‍ನಲ್ಲಿ ಸ್ಪಾಟ್ ಬುಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು. ಇದು ಭೇಟಿ ನೀಡಲು ಬುಕ್ ಮಾಡಬೇಕೆಂಬ ಅರಿವಿಲ್ಲದೆ ಬರುವ ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತದೆ.





