HEALTH TIPS

ಜವಳಿ: ದೇಶದಲ್ಲಿ ನೋಂದಣಿಯಾದ ತಯಾರಿಕಾ ಕಂಪನಿಗೆ ಮಾತ್ರ ಪಿಎಲ್‌ಐ ಸೌಲಭ್ಯ

               ನವದೆಹಲಿ: ಜವಳಿ ಉದ್ಯಮಕ್ಕೆ ಈಚೆಗೆ ಘೋಷಿಸಲಾಗಿರುವ ₹ 10,683 ಕೋಟಿ ಮೊತ್ತದ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಲ್ಲಿ ಭಾರತದಲ್ಲಿ ನೋಂದಣಿ ಆಗಿರುವ ತಯಾರಿಕಾ ಕಂಪನಿಗಳು ಮಾತ್ರ ಪಾಲ್ಗೊಳ್ಳಬಹುದು ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿದೆ.

          ಯೋಜನೆಯ ವಿವರಗಳನ್ನು ಸಚಿವಾಲಯವು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡ ಕಂಪನಿ ತಯಾರಿಸಿದ ಉತ್ಪನ್ನಗಳು ಮಾತ್ರ ಉತ್ತೇಜನಕ್ಕೆ ಅರ್ಹತೆ ಪಡೆಯುತ್ತವೆ. ಯೋಜನೆಯ ಅಡಿ 2025-26ರಿಂದ 2029-30ರವರೆಗೆ ಉತ್ತೇಜನ ನೀಡಲಾಗುತ್ತದೆ.

ಉದ್ಯಮ ಸಮೂಹವೊಂದಕ್ಕೆ ಸೇರಿದ ಒಂದು ಕಂಪನಿಗೆ ಮಾತ್ರ ‍ಪಿಎಲ್‌ಐ ಅಡಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅದೇ ಸಮೂಹದ ಬೇರೆ ಕಂಪನಿಗಳಿಗೆ ಯೋಜನೆಯ ಫಲಾನುಭವಿ ಆಗಲು ಅವಕಾಶವಿಲ್ಲ ಎಂದು ಸಚಿವಾಲಯ ಹೇಳಿದೆ.

              'ಉದ್ಯಮ ಸಮೂಹಗಳು ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಸಮೂಹವು ಸಲ್ಲಿಸಿದ ಒಂದಕ್ಕಿಂತ ಹೆಚ್ಚು ಅರ್ಜಿಗಳು ಅಂತಿಮ ಹಂತಕ್ಕೆ ಆಯ್ಕೆಯಾದಲ್ಲಿ, ಯಾವ ಕಂಪನಿಗೆ ಸೌಲಭ್ಯ ಸಿಗಬೇಕು ಎಂಬುದನ್ನು ಉದ್ಯಮ ಸಮೂಹವು ಆಗ ತೀರ್ಮಾನಿಸಬೇಕು' ಎಂದು ಹೇಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries