ತಿರುವನಂತಪುರಂ: ಇನ್ನುಮುಂದೆ ರಾಜ್ಯದ ಪೋಲೀಸರು "ಎಡಾ" "ಪೋಡಾ" ಪದಗಳನ್ನು ಬಳಸಬಾರದು ಎಂದು ಪೋಲೀಸ್ ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಡಿಜಿಪಿ ಅನಿಲ್ ಕಾಂತ್ ಸುತ್ತೋಲೆ ಹೊರಡಿಸಿದ್ದಾರೆ. ವಿಶೇಷ ಶಾಖೆಯು ಪೋಲೀಸರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಪೋಲೀಸ್ ಅಧಿಕಾರಿಗಳು ಜನರನ್ನು ಗೌರವದಿಂದ ಕಾಣಬೇಕು. ಸಭ್ಯ ಪದಗಳನ್ನು ಮಾತ್ರ ಬಳಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ, ಸೌಮ್ಯ ಮತ್ತು ದಯೆಯಿಂದಿರಿ ಎಮದು ಹೇಳಲಾಗಿದೆ.
ಹೈಕೋರ್ಟ್ ಗುರುವಾರ ಈಬಗ್ಗೆ ತೀರ್ಪು ನೀಡಿತ್ತು. ಪೋಲೀಸರು ಸಾಮಾನ್ಯವಾಗಿ ಬಳಸುವ "ಎಡಾ" "ಪೋಡಾ" ಪದಗಳಳನ್ನು ನಿಗ್ರಹಿಸುವ ಅಗತ್ಯವಿದ್ದು, ಆ ಪದಗಳು ವಸಾಹತು ವ್ಯವಸ್ಥೆಯ ಅವಶೇಷವಾಗಿದೆ. ಇಂತಹ ಅಭಿವ್ಯಕ್ತಿಗಳು ಸುಸಂಸ್ಕøತ ಸಮಾಜಕ್ಕೆ ಸೂಕ್ತವಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ತ್ರಿಶೂರ್ ಮೂಲದ ಜೆಎಸ್ ಅನಿಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಚೆರ್ಪು ಎಸ್ ಐ ಅನಿಲ್ ಮತ್ತು ಅವರ ಮಗಳ ಜೊತೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಪೋಲೀಸರು ಜನರನ್ನು ಹಾಗೆ ಕರೆಯುವುದು ಸಾಂವಿಧಾನಿಕ ನೈತಿಕತೆ ಮತ್ತು ದೇಶದ ಆತ್ಮಸಾಕ್ಷಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು.
ನ್ಯಾಯಾಲಯವು ಪೋಲೀಸ್ ಮುಖ್ಯಸ್ಥರಿಗೆ ಜನರನ್ನು ಸ್ವೀಕಾರಾರ್ಹ ಪದಗಳಿಂದ ಸಂಬೋಧಿಸುವ ಮತ್ತು ಇಲ್ಲದ ಪದಗಳನ್ನು ಬಳಸದಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ, ಜೈಲು ಡಿಜಿಪಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.





