HEALTH TIPS

ಕಾರಿಂಜದಲ್ಲಿ ಯಕ್ಷಗಾನ ತಾಳಮದ್ದಳೆ

                 ಕುಂಬಳೆ: ಇಚ್ಲಂಪಾಡಿ ಸಮೀಪದ ಕಾರಿಂಜ ಮಹಾದೇವ ದೇವಸ್ಥಾನದ ವಠಾರದಲ್ಲಿ ಕನ್ಯಾ ಸಂಕ್ರಮಣದ ಪ್ರಯುಕ್ತ ವಿರಾಮ ಯಕ್ಷಬಳಗದವರಿಂದ ಉದಯಶಂಕರ ಭಟ್ಟ ಮಜಲು ಅವರ ನೇತೃತ್ವದಲ್ಲಿ ವಾಲಿ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು. 

                ಭಾಗವತರಾಗಿ ಬೇಂದ್ರೋಡಿ ಗೋವಿಂದ ಭಟ್ ಮತ್ತು ಉದಯಶಂಕರ ಪಟ್ಟಾಜೆ, ಹಿಮ್ಮೇಳದಲ್ಲಿ ವೇಣುಗೋಪಾಲ ಬರೆಕರೆ ಮತ್ತು ಆದಿತ್ಯ ಬರೆಕರೆ, ಶ್ರೀರಾಮನಾಗಿ ಗಣೇಶ್ ಪ್ರಸಾದ್ ಕಡಪು, ವಾಲಿಯಾಗಿ ಉದಯಶಂಕರ ಭಟ್ಟ ಮಜಲು, ಹನುಮಂತನಾಗಿ ಶಿವರಾಮ ಭಂಡಾರಿ ಇಚ್ಲಂಪಾಡಿ, ತಾರೆಯಾಗಿ ಶ್ರೀಶಕುಮಾರ ಪಂಜಿತ್ತಡ್ಕ ಹಾಗೂ ಸುಗ್ರೀವನಾಗಿ ಗುರುಮೂರ್ತಿ ನಾಯ್ಕಾಪು ಸಹಕರಿಸಿದರು. ನಿವೃತ್ತ ಮುಖ್ಯಶಿಕ್ಷಕ ವಿಶ್ವನಾಥ ರೈ ಸ್ವಾಗತಿಸಿ, ಸತೀಶ ಭಟ್ ಯೆಯ್ಯೂರು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries