ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯವು ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಕೇರಳದಿಂದ ಒಟ್ಟು ಐದು ಕಾಲೇಜುಗಳು ವಿವಿಧ ವಿಭಾಗಗಳಲ್ಲಿ ಸ್ಥಾನಪಡೆದಿವೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕ್ಯಾಲಿಕಟ್ ಈ ನಿಟ್ಟಿನಲ್ಲಿ ಶ್ಲಾಘನೀಯ ಸಾಧನೆಯನ್ನು ಮಾಡಿದೆ. ವಾಸ್ತುಶಿಲ್ಪ ಕ್ಷೇತ್ರದಲ್ಲಿ ಎನ್.ಐ.ಟಿ ಕ್ಯಾಲಿಕಟ್ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಐಐಎಂ ಕೋಝಿಕ್ಕೋಡ್ ನಿರ್ವಹಣಾ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಕಾಲೇಜುಗಳಲ್ಲಿ, ತಿರುವನಂತಪುರಂ ವಿಶ್ವವಿದ್ಯಾಲಯ ಕಾಲೇಜು 25 ನೇ ಸ್ಥಾನವನ್ನು ಪಡೆದುಕೊಂಡಿದೆ. ಶ್ರೀ ಚಿತ್ರÀ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ 11 ನೇ ಸ್ಥಾನವನ್ನು ಪಡೆದುಕೊಂಡಿದೆ. ಎನ್ ಐ ಟಿ ಕೋಝಿಕ್ಕೋಡ್ ಎಂಜಿನಿಯರಿಂಗ್ ನಲ್ಲಿ 25 ನೇ ಸ್ಥಾನ ಪಡೆದಿದೆ. ವಿಶ್ವವಿದ್ಯಾನಿಲಯಗಳಲ್ಲಿ, ಕೇರಳ ವಿಶ್ವವಿದ್ಯಾಲಯವು 27 ನೇ ಸ್ಥಾನದಲ್ಲಿದೆ ಮತ್ತು ಎಂಜಿ ವಿಶ್ವವಿದ್ಯಾಲಯವು 31 ನೇ ಸ್ಥಾನದಲ್ಲಿದೆ.





