HEALTH TIPS

ಕೇರಳದಲ್ಲಿ ವಿದ್ಯಾರ್ಥಿ ಸಾರಿಗೆ ಪ್ರೊಟೋಕಾಲ್ ಗೆ ಅನುಮೋದನೆ: ವಿದ್ಯಾರ್ಥಿಗಳಿಗೆ ರಿಯಾಯಿತಿ ಮುಂದುವರಿಕೆ: ಸಾರಿಗೆ ಸಚಿವ

                  ತಿರುವನಂತಪುರಂ: ಕೇರಳದಲ್ಲಿ ವಿದ್ಯಾರ್ಥಿಗಳ ಸಾರಿಗೆ ನಿಯಮ-ನಿಬರ್ಂನೆ(ಪ್ರೊಟೋಕಾಲ್) ಗೆ ಅನುಮೋದನೆ ನೀಡಲಾಗಿದೆ. ಸಾರಿಗೆ ಮಂತ್ರಿ ಆಂಟನಿ ರಾಜು, ಶಾಲೆ ಪುನರಾರಂಭವಾದಾಗ ವಿದ್ಯಾರ್ಥಿಗಳಿಗೆ ಈಗಿರುವ ರಿಯಾಯಿತಿ ದರ ಮುಂದುವರಿಯುತ್ತದೆ. ಅಗತ್ಯ ಶಾಲೆಗಳಿಗೆ ಬಾಂಡ್ ಸೇವೆಯನ್ನು ನೀಡಲು ಸಹ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸಾರಿಗೆ ಮತ್ತು ಶಿಕ್ಷಣ ಸಚಿವರ ಸಭೆಯ ನಂತರ ಈ ಬಗ್ಗೆ ಘೋಷಿಸಿದರು.

                         ಶಾಲಾ ಬಸ್ಸುಗಳು ಅಕ್ಟೋಬರ್ 20 ರ ಮೊದಲು ಫಿಟ್ನೆಸ್ ಖಾತ್ರಿಪಡಿಸಿಕೊಳ್ಳಬೇಕು. ರಸ್ತೆ ತೆರಿಗೆ ವಿನಾಯ್ತಿಗೆ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಕಳೆದ ಅಕ್ಟೋಬರ್ ನಿಂದ ಈ ಸೆಪ್ಟೆಂಬರ್ ವರೆಗಿನ ಶಾಲಾ ಬಸ್‍ಗಳ ರಸ್ತೆ ತೆರಿಗೆಯನ್ನು ವಿನಾಯಿತಿ ನೀಡಲಾಗುವುದು ಎಂದು ಸಚಿವರು ಹೇಳಿದರು. ಶಾಲೆಗೆ ಸೇವೆ ಸಲ್ಲಿಸುವ ವಾಹನಗಳು ಕೊರೋನಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಂಟನಿ ರಾಜು ಸಲಹೆ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries