HEALTH TIPS

ಚಿಕನ್‌ಗುನ್ಯಾ, ಡೆಂಗ್ಯೂ, ಮಲೇರಿಯಾ ಜ್ವರದಿಂದ ಚೇತರಿಸಲು ಟಿಪ್ಸ್

           ಇತ್ತೀಚೆಗೆ ಡೆಂಗ್ಯೂ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿವೆ. ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಇವೆಲ್ಲಾ ಸೊಳ್ಳೆಗಳಿಂದ ಬರುವ ಕಾಯಿಲೆಗಳಾಗಿದ್ದು ಬಂದರೆ ಚೇತರಿಸಿಕೊಳ್ಳಲು ವಾರಗಳೇ ಬೇಕಾಗುವುದು. ಚಿಕನ್‌ಗುನ್ಯಾ, ಡೆಂಗ್ಯೂನಿಂದ ಚೇತರಿಸಿಕೊಂಡರೂ ಸಂಧಿ ನೋವು, ಮೈ ಕೈ ನೋವು ಇವೆಲ್ಲಾ ಕೆಲವರಿಗೆ ವರ್ಷಗಳವರೆಗೆ ಕಾಡಬಹುದು.


            ಇಂಥ ಕಾಯಿಲೆಗಳು ಬಂದಾಗ ಚಿಕಿತ್ಸೆ ಪಡೆಯುವುದರ ಜೊತೆಗೆ ಆಹಾರಕ್ರಮದ ಕಡೆಗೂ ತುಂಬಾನೇ ಗಮನ ನೀಡಬೇಕು, ಆಗ ಮಾತ್ರ ಬೇಗನೆ ಚೇತರಿಸಿಕೊಳ್ಳಲು ಸಾಧ್ಯ. ಚಿಕನ್‌ಗುನ್ಯಾ, ಡೆಂಗ್ಯೂ, ಮಲೇರಿಯಾ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕೆಂಬ ಟಿಪ್ಸ್ ನೀಡಲಾಗಿದೆ ನೋಡಿ:


                        ಬೆಳಗ್ಗೆ ಗುಲ್ಕಂದ ತಿನ್ನಿ

           ಬೆಳಗ್ಗೆ ಒಂದು ಚಮಚ ಗುಲ್ಕಂದ ತಿನ್ನಿ ಅಥವಾ ಊಟಕ್ಕಿಂತ ಮುಂಚೆ ಸೇವಿಸಿ. ಇದನ್ನು ತಿನ್ನುವುದರಿಂದ ಅಸಿಡಿಟಿ, ವಾಂತಿ ಇವುಗಳನ್ನು ತಡೆಗಟ್ಟುತ್ತದೆ. ಇದು ಹೊಟ್ಟೆಯ ಉಷ್ಣತೆ ಕಡಿಮೆ ಮಾಡುವುದು. ಅಲ್ಲದೆ ಕಾಯಿಲೆ ಬಿದ್ದಾಗ ಜೀರ್ಣಕ್ರಿಯೆ ತುಂಬಾ ನಿಧಾನವಾಗುವುದು. ಗುಲ್ಕಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡಲು ಸಹಕಾರಿಯಾಗಿದೆ.

ಔಷಧೀಯ ಗುಣವಿರುವ ಪಾನೀಯ

             ನೀವು ಕಾಯಿಲೆ ಬಿದ್ದಾಗ ಔಷಧೀಯ ಗುಣವಿರುವ ಪಾನೀಯ ಮಾಡಿ ಕುಡಿಯುವುದರಿಂದ ಚೇತರಿಸಲು ಸಹಕಾರಿ. ಆಯಂಟಿ ಇನ್‌ಫ್ಲೇಮಟರಿ ಡ್ರಿಂಜ್‌ ಎಂದು ಇದನ್ನು ಕರೆಯಲಾಗುವುದು. ಈ ಪಾನೀಯ ಮಾಡುವುದು ಸುಲಭ. ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ, 2-3 ಎಸಳು ಕೇಸರಿ, ಸ್ವಲ್ಪ ನಟ್‌ಮಗ್‌ ಹಾಕಿ ಕುದಿಸಿ. ಒಂದು ಲೋಟ ಹಾಲು ಅರ್ಧ ಲೋಟ ಆಗುವಷ್ಟು ಹೊತ್ತು ಕುದಿಸಿ. ನಂತರ ಇದನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು. ಇದು ಉರಿಯೂತ ಕಡಿಮೆ ಮಾಡುವಲ್ಲಿಯೂ ಸಹಕಾರಿ.

                        ಗಂಜಿ

               ಇನ್ನು ಜ್ವರ ಬಂದಾಗ ಅನ್ನ ತಿನ್ನುವ ಬದಲಿಗೆ ಗಂಜಿ ಮಾಡಿ ಕುಡಿಯಬೇಕು, ಕುಚಲಕ್ಕಿ ಅಥವಾ ಬೆಳ್ತಕ್ಕಿ ಗಂಜಿ ಮಾಡಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಗಂಜಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿಯೂ ಸಹಕಾರಿ.

                            ಸ್ವಲ್ಪ ಹೊತ್ತು ಸುಪ್ತ ಬದ್ಧ ಕೋನಾಸನದಲ್ಲಿ ಮಲಗಿ

               ಇದೇನು ತುಂಬಾ ಕಷ್ಟದ ಭಂಗಿಯಲ್ಲ, ಯಾರೂ ಕೂಡ ಅಭ್ಯಾಸ ಮಾಡಬಹುದು. ಬೆನ್ನು ಕೆಳಗೆ ಇರುವಂತೆ ಮಲಗಿ ಕಾಲುಗಳನ್ನು ಪಾದಗಳನ್ನು ಸೇರಿಸಿ ರಿಲ್ಯಾಕ್ಡ್ ಆಗಿ ಮಲಗಿ. ಇದರಿಂದ ಬೆನ್ನುನೀವು ಕಡಿಮೆಯಾಗುವುದು, ಜೊತೆಗೆ ತಲೆಸುತ್ತು ಕೂಡ ಕಡಿಮೆಯಾಗುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries