ಕುಂಬಳೆ: ಎಸ್ ಎಸ್ ಎಫ್ ಇಪ್ಪತ್ತೆಂಟನೆಯ ಕಾಸರಗೋಡು ಜಿಲ್ಲಾ ಸಾಹಿತ್ಯೋತ್ಸವ ಇತ್ತೀಚೆಗೆ ಮುಕ್ತಾಯಗೊಂಡಿತು. ಮೂರು ದಿನಗಳಲ್ಲಿ ನಡೆದ ಕಲಾ ಸಾಹಿತ್ಯ ಸ್ಪರ್ಧೆಗಳಲ್ಲಿ ಕುಂಬಳೆ ಡಿವಿಷನ್ 297 ಅಂಕಗಳೊಂದಿಗೆ ವಿಜೇತರಾದರು.
265 ಅಂಕಗಳೊಂದಿಗೆ ಕಾಸರಗೋಡು ಡಿವಿಷನ್ ಹಾಗೂ 254 ಅಂಕಗಳೊಂದಿಗೆ ಉದುಮ ಡಿವಿಷನ್ ದ್ವಿತೀಯ ಮತ್ತು ತೃತೀಯ ಸ್ಥಾನಿಗಳಾದರು. ಕಲಾ ಪ್ರತಿಭೆಯಾಗಿ ಉದುಮ ಡಿವಿಷನಿನ ಹಾದಿ ಮತ್ತು ಬದಿಯಡ್ಕ ಡಿವಿಷನಿನ ಜವಾದ್ ಹಾಗೂ ಪ್ರತಿಭೆಯಾಗಿ ಮಾಲಿಕ್ ದೀನಾರ್ ಫಾರ್ಮಸಿಯ ಮುಝಮ್ಮಿಲ್‍ರನ್ನು ಆರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಪೂತಪ್ಪಲಂರವರ ಅಧ್ಯಕ್ಷತೆಯಲ್ಲಿ ಸಮಸ್ತ ಕೇಂದ್ರ ಮುಶಾವರಾ ಸದಸ್ಯ ಮಾಣಿಕ್ಕೋತ್ ಅಬ್ದುಲ್ಲ ಮುಸ್ಲಿಯಾರ್ ಉದ್ಘಾಟಿಸಿದರು. ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ಪ್ರಾರ್ಥನೆ ನಡೆಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್ ಜಾಫರ್ ಅಭಿನಂದನಾ ಭಾಷಣ ಮಾಡಿದರು. ಪಲ್ಲಂಗೋಡ್ ಅಬ್ದುಲ್ ಖಾದಿರ್ ಮದನಿ, ಅಹ್ಮದ್ ಬೆಂಡಿಚ್ಚಾಲ್, ನೂರ್ ಮುಹಮ್ಮದ್ ಹಾಜಿ ಬಹುಮಾನ ಫಲಕ ವಿತರಿಸಿದರು. ಫಾರೂಕ್ ಪೊಸೋಟ್ ಸ್ವಾಗತಿಸಿ, ಕರೀಂ ಜೌಹರಿ ವಂದಿಸಿದರು.

