ಬದಿಯಡ್ಕ: ಭಾರತೀಯ ಜನತಾ ಪಕ್ಷದ ಕಾಸರಗೋಡು ಮಂಡಲ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಸೋಮವಾರ ಆರೋಗ್ಯ ಕಾರ್ಯಕರ್ತರ ಶಿಬಿರವನ್ನು ಆಯೋಜಿಸಲಾಯಿತು. ಪಕ್ಷದ ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷ ಶಿವಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಉದ್ಘಾಟಿಸಿದರು. ಅವರು ಮಾತನಾಡಿ ಬಿಜೆಪಿ ನೇತೃತ್ವದಲ್ಲಿ ದೇಶೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರ ತಂಡವನ್ನು ರೂಪುಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ದೇಶೀಯ ಮಟ್ಟದಲ್ಲಿ 15 ಲಕ್ಷ, ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ತಂಡವನ್ನು ರಚಿಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಂದುಗೂಡಬೇಕು ಎಂದು ಕರೆಯಿತ್ತರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ವಿಜಯ ರೈ, ಎಸ್.ಟಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿ ಅಶ್ವಿನಿ ಮೊಳೆಯಾರು, ಬೆಳ್ಳೂರು ಗ್ರಾಪಂ ಅಧ್ಯಕ್ಷ ಶ್ರೀಧರ ಬೆಳ್ಳೂರು ಉಪಸ್ಥಿತರಿದ್ದರು. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ಸಹಾಯಕ ಆರೋಗ್ಯ ಅಧಿಕಾರಿ ದೇವಿಜಾಕ್ಷನ್ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಕೊರೊನಾವನ್ನು ಹೊಡೆದೋಡಿಸಲು ಸಾಧ್ಯವಿಲ್ಲ. ಜನತೆಯ ಸಹಕಾರ, ಆರೋಗ್ಯ ಕಾರ್ಯಕರ್ತರ ಶ್ರಮದಿಂದ ಬಂದಂತಹ ಕಷ್ಟವನ್ನು ಎದುರಿಸಿ ಮುಂದುವರಿಯಬಹುದಾಗಿದೆ ಎಂದು ತಿಳಿಸುತ್ತಾ ಕೊರೋನಾ ಕುರಿತಾದ ಅಂಕಿ ಅಂಶಗಳನ್ನು ವಿವರವಾಗಿ ನೀಡಿದರು. ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಸ್ವಾಗತಿಸಿ, ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು.


