ಬದಿಯಡ್ಕ: ಪ್ರಾಚೀನ ಕಾಲದಿಂದಲೂ ಕಾರಣಿಕ ಕ್ಷೇತ್ರವಾಗಿ ಧಾರ್ಮಿಕ-ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾದ ದೇವಾಲಯಗಳು ಕ್ಷಿತಿಗೊಳ್ಳುವುದರಿಂದ ಸಾಮಾಜಿಕವಾಗಿ ಸಂಕಷ್ಟಗಳು ಬಂದೆರಗುತ್ತದೆ. ಈ ನಿಟ್ಟಿನಲ್ಲಿ ಪಾಳುಬಿದ್ದ ಕಾರಣಿಕ ಕ್ಷೇತ್ರವಾದ ಮೋಪಾಲ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಜೀರ್ಣೋದ್ದಾರಕ್ಕೆ ತೊಡಗಿಸಿಕೊಂಡಿರುವುದು ಭರವಸೆಯ ದಿನಗಳಿಗೆ ಕಾರಣವಾಗಲಿದ್ದು, ಎಲ್ಲರ ಸಹಕಾರದೊಂದಿಗೆ ಶೀಘ್ರ ಸಾಕಾರಗೊಳ್ಳಲಿ ಎಮದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಎಡನೀರು ಸಮೀಪದ ಮೋಪಾಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ಇತ್ತೀಚೆಗೆ ಶ್ರೀಮದ್ ಎಡನೀರು ಮಠದಲ್ಲಿ ನಡೆದ ಪೂರ್ವಭಾವೀ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಅವರು ಆಶೀರ್ವಚನ ನೀಡಿದರು.
ಸಭೆಯಲ್ಲಿ ಎಡನೀರು ಮಠಾಧೀಶರ ಪ್ರಥಮ ಚಾತುರ್ಮಾಸ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮಲ್ಲಶ್ರೀ ಕ್ಷೇತ್ರದ ಧರ್ಮದರ್ಶಿ ವಿಷ್ಣು ಭಟ್ ಮಲ್ಲ, ಸಾಮಾಜಿಕ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಎಡನೀರು, ಕೆ.ಮಾಧವ ಹೇರಳ, ಕಮಲಾಕ್ಷ ಕಲ್ಲುಗದ್ದೆ, ಎಸ್.ಎನ್.ಮಯ್ಯ ಬದಿಯಡ್ಕ, ಅಪ್ಪಯ್ಯ ನಾಯ್ಕ್ ಮಧೂರು, ನವೀನ ಭಟ್ ಕುಂಜಿರಕಾನ ಸಲಹೆ ಸೂಚನೆಗಳನ್ನು ನೀಡಿದರು.
ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಶ್ರೀಗಳು ಗೌರವಾಧ್ಯಕ್ಷರಾಗಿ ಜೀರ್ಣೋದ್ದಾರ ಸಮಿತಿ ರೂಪೀಕರಿಸಲಾಯಿತು.
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವಿಷ್ಣು ಭಟ್ ಮಲ್ಲ, ವಸಂತ ಪೈ ಬದಿಯಡ್ಕ, ರಾಜೇಂದ್ರ ಕಲ್ಲೂರಾಯ ಎಡನೀರು ಅವರನ್ನು ರಕ್ಷಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ನವೀನಕುಮಾರ್ ಕುಂಜರಕಾನ(ಅಧ್ಯಕ್ಷ), ಕೆ.ಎಂ.ಶರ್ಮ ಎಡನೀರು (ಕಾರ್ಯದರ್ಶಿ), ವಾಸುದೇವ ಭಟ್ ಚೂರಿಮೂಲೆ(ಖಜಾಂಜಿ)ಅವರನ್ನು ಸಮಿತಿಗೆ ಆರಿಸಲಾಯಿತು. ತೇಜಸ್ವಿ ಕಳೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವಿತ್ರನ್ ಬೇವಿಂಜೆ ಸ್ವಾಗತಿಸಿ, ಮಧುಸೂದನ ಕೆ ವಂದಿಸಿದರು. ಕೆ.ಎಂ.ಶರ್ಮ ಎಡನೀರು ನಿರೂಪಿಸಿದರು. ವೈದೇಹಿ ಹಾಗೂ ವೈಷ್ಣವಿ ಪ್ರಾರ್ಥನೆ ಹಾಡಿದರು.


