HEALTH TIPS

ನಕ್ಸಲ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅಮಿತ್ ಶಾ ಚರ್ಚೆ

             ನವದೆಹಲಿನಕ್ಸಲ್ ಬಾಧಿತ ಆರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಲ್ಕು ರಾಜ್ಯಗಳ ಉನ್ನತ ಅಧಿಕಾರಿಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಭದ್ರತಾ ಪರಿಸ್ಥಿತಿಯನ್ನು ಕುರಿತು ಸಭೆ ನಡೆಸಿದರು.

           ಮುಖ್ಯಮಂತ್ರಿಗಳಾದ ನವೀನ್‌ ಪಟ್ನಾಯಕ್ (ಒಡಿಶಾ), ಕೆ.ಚಂದ್ರಶೇಖರ ರಾವ್ (ತೆಲಂಗಾಣ), ನಿತೀಶ್‌ ಕುಮಾರ್ (ಬಿಹಾರ), ಶಿವರಾಜ ಸಿಂಗ್ ಚೌಹಾಣ್‌ (ಮಧ್ಯಪ್ರದೇಶ), ಉದ್ಧವ್‌ ಠಾಕ್ರೆ (ಮಹಾರಾಷ್ಟ್ರ), ಹೇಮಂತ್‌ ಸೊರೆನ್ (ಜಾರ್ಖಂಡ್) ಅವರು ಪಾಲ್ಗೊಂಡಿದ್ದರು.

          ಪಶ್ಚಿಮ ಬಂಗಾಳ, ಛತ್ತೀಸಗಡ, ಆಂಧ್ರಪ್ರದೇಶ ಮತ್ತು ಕೇರಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿತ್ತು. ಇವರ ಬದಲಾಗಿ ಆ ರಾಜ್ಯಗಳ ಸಚಿವರು ಅಥವಾ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

             ನಕ್ಸಲ ಬಾಧಿತ ರಾಜ್ಯಗಳಲ್ಲಿ ಇರುವ ಭದ್ರತಾ ಪರಿಸ್ಥಿತಿ, ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆ, ನಕ್ಸಲ್‌ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಕುರಿತು ಕೇಂದ್ರ ಸಚಿವರು ಚರ್ಚಿಸಿದರು.

           ಅಲ್ಲದೆ ಈ ರಾಜ್ಯಗಳ ಬೇಡಿಕೆ, ಭದ್ರತಾ ಪಡೆಗಳ ಬಲ ಹೆಚ್ಚಿಸುವುದು, ರಸ್ತೆ, ಸೇತುವೆ, ಶಾಲೆ, ಆರೋಗ್ಯ ಕೇಂದ್ರಗಳ ನಿರ್ಮಾಣವು ಒಳಗೊಂಡಂತೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

           ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರು, ರಾಜ್ಯದಲ್ಲಿ ಮೂರು ಜಿಲ್ಲೆಗಳಿಗೆ ಮಾತ್ರವೇ ಮಾವೋವಾದಿಗಳ ಸಮಸ್ಯೆ ಸೀಮಿತವಾಗಿದೆ ಎಂದು ತಿಳಿಸಿದರು.

                ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಗಿರಿರಾಜ ಸಿಂಗ್, ಅರ್ಜುನ್ ಮುಂಡಾ, ನಿತ್ಯಾನಂದ ರೈ ಸಭೆಯಲ್ಲಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ, ಕೇಂದ್ರ ಗುಪ್ತದಳದ ನಿರ್ದೇಶಕ ಅರವಿಂದ ಕುಮಾರ್, ಹಿರಿಯ ಪೊಲೀಸ್‌ ಅಧಿಕಾರಿಗಳಿದ್ದರು.

           ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶದ ಪ್ರಕಾರ, ಮಾವೋವಾದಿಗಳಿಂದ ಹಿಂಸಾಕೃತ್ಯ ಘಟನೆಗಳು ಗಣನೀಯವಾಗಿ ಕಡಿಮೆಯಾಗಿವೆ. ಸದ್ಯ 45 ಜಿಲ್ಲೆಗಳಿಗೆ ಇವರ ಚಟುವಟಿಕೆ ಸೀಮಿತವಾಗಿದೆ. ಆದರೂ, 90 ಜಿಲ್ಲೆಗಳನ್ನು ಬಾಧಿತ ಪ್ರದೇಶಗಳು ಎಂದು ಕೇಂದ್ರ ಗುರುತಿಸಿದ್ದು, ಭದ್ರತೆಗೆ ಸಂಬಂಧಿಸಿದ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.

           ನಕ್ಸಲ್‌ ಬಾಧಿತ ಜಿಲ್ಲೆಗಳಲ್ಲಿ ನಡೆದ ಹಿಂಸಾಕೃತ್ಯಗಳಲ್ಲಿ 2015ರಿಂದ 2020ರ ಅವಧಿಯಲ್ಲಿ 380 ಭದ್ರತಾ ಸಿಬ್ಬಂದಿ, 1000 ನಾಗರಿಕರು ಮತ್ತು 900 ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 4,200 ನಕ್ಸಲರು ಶರಣಾಗತರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries