ಪೆರ್ಲ: ಚೆರ್ಕಳ -ಕಲ್ಲಡ್ಕ ರಸ್ತೆ ಅಭಿವೃದ್ಧಿಯ ನಡುವೆ ಪೆರ್ಲ ಸಮೀಪದ ಗೋಳಿತ್ತಡ್ಕದಲ್ಲಿ ಖಾಸಗೀ ಸ್ಥಳ ಚರ್ಚೆಯಲ್ಲಿದ್ದು ಇಲ್ಲಿಗೆ ಮಂಜೇಶ್ಚರ ಶಾಸಕರು ಭೇಟಿ ನೀಡಿ ಪರಶೀಲನೆ ನಡೆಸಿದರು. ಇಲ್ಲಿ ಖಾಸಗೀ ವ್ಯಕ್ತಿಗಳ ಬೇಡಿಕೆಯನ್ನೊಡ್ಡಿದ್ದು ರಸ್ತೆ ಕ್ರಿಯಾ ಸಮಿತಿಯ ಮನವಿಯ ಮೇರೆಗೆ ಶಾಸಕ ಎಕೆಎಂ ಆಶ್ರಫ್ ಸ್ಥಳ ಪರಿಶೀಲನೆಗೈದರು. ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಹಮೀದ್ ನಲ್ಕ, ಆಶ್ರಫ್ ಬಜಕೂಡ್ಲು ,ಕೃಷ್ಣ ಜಿ.ಗೋಳಿತ್ತಡ್ಕ ಮೊದಲಾದವರಿದ್ದರು.





