HEALTH TIPS

ವರ್ಕ್‌ ಫ್ರಂ ಹೋಂ ಬಳಿಕ ನೈಸರ್ಗಿಕ ಗರ್ಭಧಾರಣೆ ಹೆಚ್ಚಳ

               ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಶುರುವಾದ ವರ್ಕ್ ಫ್ರಂ ಹೋಂ ದಂಪತಿಗೆ ವರವಾಗಿದೆ ಎಂದೇ ಹೇಳಬಹುದು.

              ಅನೇಕ ವರ್ಷಗಳಿಂದ ಮಕ್ಕಳಿಲ್ಲದೆ, ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಚಿಕಿತ್ಸೆಗೆ ಒಳಗಾಗುತ್ತಿದ್ದ ಹಲವು ಮಹಿಳೆಯರು ನೈಸರ್ಗಿಕವಾಗಿಯೇ ಗರ್ಭಧರಿಸುತ್ತಿದ್ದಾರೆ ಎನ್ನುವುದು ಸಂತಸದ ಸಂಗತಿ.

            ಭಾರತದಲ್ಲಿರುವ ಕೆಲ ದಂಪತಿಗಳು ಅಮೆರಿಕಾ ಹಾಗೂ ಬ್ರಿಟನ್ ರಾಷ್ಟ್ರಗಳ ಸಮಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಜೀವನ ಶೈಲಿಗಳು ಬದಲಾಗುತ್ತವೆ.

         ಹೆಚ್ಚಿನ ಪ್ರಯಾಣ ಕೂಡ ಗರ್ಭಧಾರಣೆಯಲ್ಲಿ ಸಮಸ್ಯೆಯಾಗಲು ಕಾರಣವಾಗಬಹುದು. ಲಾಕ್ಡೌನ್ ಹಾಗೂ ವರ್ಕ್ ಫ್ರಂ ಹೋಮ್ ನಿಂದ ಪ್ರಯಾಣ ಕಡಿಮೆಯಾಗಲಿದೆ. ಇದು ನೈಸರ್ಗಿಕವಾಗಿ ಗರ್ಭಧರಿಸಲು ಸಹಾಯಕವಾಗಿದೆ ಎಂದು ಬಿಜಿಎಸ್ ಗ್ಲೀಗಲ್ಸ್ ಗ್ಲೋಬಲ್ ಆಸ್ಪತ್ರೆಯ ಫರ್ಟಿಲಿಟಿ ತಜ್ಞೆ ಡಾ.ಸೌಮ್ಯ ಸಂಗಮೇಶ್ ಹೇಳಿದ್ದಾರೆ.

           ನಮ್ಮ ಬಳಿ ಚಿಕಿತ್ಸೆಗಾಗಿ ಬಂದ ಶೇ.30ರಷ್ಟು ದಂಪತಿಗಳು ಲಾಕ್‌ಡೌನ್ ಹಾಗೂ ವರ್ಕ್ ಫ್ರಂ ಹೋಮ್ ನಿಂದಾಗಿ ನೈಸರ್ಗಿಕವಾಗಿಯೇ ಗರ್ಭಧರಿಸಿ ಮಗು ಪಡೆದುಕೊಂಡಿದ್ದಾರೆಂದು ಫರ್ಟಿಲಿಟಿ ತಜ್ಞರು ಹೇಳಿದ್ದಾರೆ.

                ಮದುವೆಯಾಗಿ 8 ವರ್ಷಗಳಾಗಿ ಈ ನಡುವೆ ಎರಡು ಬಾರಿ ಐವಿಎಫ್ ಮೊರೆ ಹೋಗಿ ಮಗುವಾಗದೆದ ಬೇಸರದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಮಮತಾ ಎಂಬುವವರು, ಲಾಕ್‌ಡೌನ್ ಅವಧಿಯಲ್ಲಿ ನೈಸರ್ಗಿಕವಾಗಿ ಗರ್ಭಧರಿಸುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

          ಇದು ನಮಗೆ ಒಂದು ಪವಾಡವೆಂದೇ ಎನಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನನ್ನ ಪತಿ ತೂಕವನ್ನು ಕಳೆದುಕೊಂಡರು, ಈ ಸಮಯದಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ, ಪಾರ್ಟಿಗಳಿಗೆ ಹೋಗುವುದು ನಿಯಂತ್ರಣಕ್ಕೆ ಬಂದಿತ್ತು. ವರ್ಕ್ ಫ್ರಂ ಹೋಮ್ ಇದ್ದ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ಪ್ರಯಾಣಿಸುವುದು ಕಡಿಮೆಯಾಯಿತು. ನಾನು ಸಹಜವಾಗಿಯೇ ಗರ್ಭಧರಿಸಲು ಸಹಾಯ ಮಾಡಿತಚು ಎಂದು ನಾನು ಭಾವಿಸುತ್ತೇನೆಂದು ಸ್ವಾತಿ ಹೇಳಿದ್ದಾರೆ.

ಇದು ನಿಜಕ್ಕೂ ಸಂತಸದ ಸಮಾಚಾರವಾಗಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ಸಾಕಷ್ಟು ದಂಪತಿಗಳು ಐವಿಎಫ್ ತಂತ್ರವನ್ನು ಅಳವಡಿಸಿಕೊಳ್ಳಲು ನಮ್ಮ ಬಳಿ ಬಂದಿದ್ದರು.

           ಅದರಲ್ಲಿ ಹಲವು ಲಾಕ್ಡೌನ್ ಹಾಗೂ ವರ್ಕ್ ಫ್ರಂ ಹೋಮ್ ನಿಂದಾಗಿ ನೈಸರ್ಗಿಕವಾಗಿಯೇ ಗರ್ಭಧರಿಸಿ ಮಗು ಪಡೆದುಕೊಂಡಿದ್ದಾರೆ. ಎಸ್ ಡಿಎಎಸಿ ನೋಂದಾಯಿತ ವೀರ್ಯ ಬ್ಯಾಂಕ್‌ನ ಡಾ ಪಲ್ಲವಿ ಎ ರಾವ್ ಅವರು ಹೇಳಿದ್ದಾರೆ.

             ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳದ ಹಾಗೂ ಚಿಕಿತ್ಸೆಯನ್ನು ಮುಂದೂಡಿದ್ದ ಮಹಿಳೆಯರು ಕೂಡ ಗರ್ಭಧರಿಸಿದ್ದಾರೆ. ಕಡಿಮೆಯಾದ ಮಾನಸಿಕ ಒತ್ತಡ ಹಾಗೂ ದಂಪತಿಗಳು ಹೆಚ್ಚು ಸಮಯ ಕಳೆದಿರುವುದು ಕೂಡ ಈ ಬೆಳವಣಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

        ಸ್ತ್ರೀರೋಗ ತಜ್ಞರು ಮಾತನಾಡಿ, ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ವರ್ಕ್ ಫ್ರಂ ಹೋಮ್ ಸಾಕಷ್ಟು ಸಹಾಯಕವಾಗಿದೆ ಎಂದು ಹೇಳಿದ್ದಾರೆ.

           ಈ ನಡುವೆ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಸೆಂಟರ್‌ನ ಫೆಸಿಲಿಟಿ ಡೈರೆಕ್ಟರ್ ಡಾ ಅನು ಕೊಟ್ಟೂರ್ ಅವರು ಮಾತನಾಡಿ, ನಮ್ಮ ಕೇಂದ್ರಕ್ಕೆ ಐವಿಎಫ್ ಚಿಕಿತ್ಸೆಗಾಗಿ ಬಂದ ಶೇ.25ರಷ್ಟು ದಂಪತಿಗಳು ಲಾಕ್‌ಡೌನ್ ಸಮಯದಲ್ಲಿ ಸ್ವಾಭಾವಿಕವಾಗಿ ಗರ್ಭಧರಿಸಿದ ಉದಾಹರಣೆಗಳಿವೆ ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries