HEALTH TIPS

ಕಾರು, ಬಸ್ಸು ಅಲ್ಲ. ರೈಲನ್ನೇ ತಳ್ಳಿದ ಜನರು!- ವಿಡಿಯೋ ವೈರಲ್‌

                 ಹರ್ಡಾ : ಮಧ್ಯಪ್ರದೇಶದ ಹರ್ಡಾದ ರೈಲ್ವೆ ನಿಲ್ದಾಣದಲ್ಲಿ ಟವರ್ ವ್ಯಾಗನ್‌ನಲ್ಲಿ (ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳಿಗೆ ಶಕ್ತಿ ತುಂಬುವ ಕೇಬಲ್‌ಗಳನ್ನು ಪರೀಕ್ಷಿಸಲು ಬಳಸುವ ಸ್ವಯಂ-ಚಾಲಿತ ಘಟಕ) ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಜನರು ರೈಲನ್ನು ತಳ್ಳಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ಟ್ರ್ಯಾಕ್‌ ಬಳಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದ್ದರಿಂದ ಟವರ್‌ ವ್ಯಾಗನ್‌ ನಿಂತಿತ್ತು. ಅದರಲ್ಲಿ ತಾಂತ್ರಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದು ಚಲಿಸಲು ಸಾಧ್ಯವಾಗಲಿಲ್ಲ. ಈ ರೈಲಿನ ಬೆನ್ನಲ್ಲೇ ಇದೇ ಟ್ರ್ಯಾಕ್‌ ಮೇಲೆ ಇಟಾರಸಿಯಿಂದ ಪವನ್‌ ಎಕ್ಸ್‌ಪ್ರೆಸ್‌ ರೈಲು ಬರುತ್ತಿತ್ತು. ಅದನ್ನು ದೂರವೇ ನಿಲ್ಲಿಸಲಾಗಿತ್ತು. ಅದರೆ ಈ ರೈಲು ಮುಂದೆ ಸಾಗದ ಕಾರಣ, ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿ ಜನರೇ ರೈಲನ್ನು ತಳ್ಳಿಕೊಂಡು ಹೋಗುವಂತಾಯಿತು.




              ಸಾಮಾನ್ಯವಾಗಿ ಇಂಥ ಸಮಸ್ಯೆ ಎದುರಾದಾಗ ಯಂತ್ರಗಳ ಸಹಾಯದಿಂದ ರೈಲು ಚಲಿಸುವಂತೆ ಮಾಡಲಾಗುತ್ತದೆ. ಆದರೆ ಈ ಘಟನೆಯಲ್ಲಿ ಅದು ಆರಂಭದಲ್ಲಿ ಸಾಧ್ಯವಾಗದ ಕಾರಣ, ಜನರೇ ರೈಲನ್ನು ತಳ್ಳಿಕೊಂಡು ಹೋಗಿದ್ದಾರೆ. ನಂತರ ಅದನ್ನು ಸರಿಪಡಿಸಲಾಗಿದೆ.

                ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಹಲವಾರು ಮಂದಿ ಕಮೆಂಟ್‌ ಮಾಡುತ್ತಿದ್ದಾರೆ.

                   ನೀವೂ ನೋಡಿ ವಿಡಿಯೋ:

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries