HEALTH TIPS

ಕೇರಳದಿಂದ ಬಂದವರಿಗೆ ಕ್ವಾರಂಟೈನ್; ಗೊಂದಲ ಮೂಡಿಸಿದ ಆದೇಶ

              ಬೆಂಗಳೂರು: ಕರ್ನಾಟ ಸರ್ಕಾರ ಕೇರಳದಿಂದ ಬರುವವರು 7 ದಿನ ಕ್ವಾರಂಟೈನ್‌ನಲ್ಲಿರಬೇಕು ಎಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಪ್ರತಿನಿತ್ಯ ಸಂಚಾರ ನಡೆಸುವ ಜನರಿಗೆ ಗೊಂದಲ ಉಂಟಾಗಿದೆ. ಸರ್ಕಾರವೂ ಪ್ರತಿದಿನ ಜನರು ಜನರ ಕ್ವಾರಂಟೈನ್‌ಗೆ ಹೇಗೆ ವ್ಯವಸ್ಥೆ ಮಾಡಲಿದೆ? ಎಂಬುದು ಪ್ರಶ್ನೆಯಾಗಿದೆ.


ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಮಂಗಳವಾರ ಸಹ ರಾಜ್ಯದಲ್ಲಿ 30,000 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆದ್ದರಿಂದ ಗಡಿಭಾಗದಲ್ಲಿರುವ ಜಿಲ್ಲೆ ಮತ್ತು ರಾಜ್ಯಕ್ಕೆ ಆಗಮಿಸುವ ಜನರಿಗೆ ಕರ್ನಾಟಕ ಸರ್ಕಾರ ಕ್ವಾರಂಟೈನ್‌ ಕಡ್ಡಾಯಗೊಳಿಸಿದೆ.

          ಕರ್ನಾಟಕಕ್ಕೆ ಕೇರಳದಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ಆರ್‌ಟಿಪಿಸಿಆರ್ ನಗೆಟಿವ್ ವರದಿ ಅಥವ ಎರಡು ಡೋಸ್ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರವನ್ನು ಹೊಂದಿದ್ದರೂ ಸಹ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

             ಪ್ರತಿದಿನ ಸುಮಾರು 25 ಸಾವಿರ ಜನರು ಕೇರಳದಿಂದ ಬೆಂಗಳೂರಿಗೆ ಆಗಮಿಸುತ್ತಾರೆ. 6 ಹಗಲು ರೈಲು, ಬಸ್, ಖಾಸಗಿ ವಾಹನ, 11 ಹಗಲು ವಿಮಾನಗಳು ಕೇರಳದಿಂದ ಆಗಮಿಸುತ್ತವೆ. ಇಷ್ಟು ಜನರನ್ನು 7 ದಿನ ಕ್ವಾರಂಟೈನ್ ಮಾಡಲು ಕರ್ನಾಟಕ ಏನು ವ್ಯವಸ್ಥೆ ಮಾಡಿಕೊಂಡಿದೆ ಎಂಬುದು ಪ್ರಶ್ನೆಯಾಗಿದೆ.

             ಅಲ್ಲದೇ ಒಂದೆರಡು ದಿನದ ಕೆಲಸಗಳಿಗಾಗಿ ಬೆಂಗಳೂರಿಗೆ ಕೇರಳದವರು ಆಗಮಿಸಿದವರು 7 ದಿನ ಕ್ವಾರಂಟೈನ್‌ನಲ್ಲಿರಬೇಕು ಎಂದರೆ ಹೇಗೆ? ಎಂದು ಜನರು ಗೊಂದಲಗೊಂಡಿದ್ದಾರೆ. ಮಂಗಳವಾರದಿಂದಲೇ ಕೇರಳದಿಂದ ಬಂದವರ ಸ್ವ್ಯಾಬ್ ಸಂಗ್ರಹ ನಡೆಯುತ್ತಿದೆ. ಆದರೆ ವರದಿ ಬರುವ ತನಕ ಎಲ್ಲಿ ಕ್ವಾರಂಟೈನ್ ಆಗಬೇಕು ಎಂಬುದು ಗೊಂದಲಕ್ಕೆ ಕಾರಣವಾಗಿದೆ.

          ಕರ್ನಾಟಕ-ಕೇರಳ ಟ್ರಾವೆಲರ್ಸ್ ಫೋರಂ ಸಹ ಇದೇ ಪ್ರಶ್ನೆಯನ್ನು ಎತ್ತಿದೆ. ಕೇರಳದ ಪರಿಸ್ಥಿತಿ ನಮಗೂ ಅರ್ಥವಾಗುತ್ತದೆ. ಆದರೆ 7 ದಿನದ ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಸರ್ಕಾರ ಯಾವ ವ್ಯವಸ್ಥೆಯನ್ನು ಮಾಡಿಕೊಂಡಿದೆ? ಎಂದು ಪ್ರಶ್ನಿಸಿದ್ದಾರೆ.

           ಒಂದು ವೇಳೆ 7 ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಸರ್ಕಾರ ವ್ಯವಸ್ಥೆ ಮಾಡುವುದಿಲ್ಲ ಎಂದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸ್ವ್ಯಾಬ್ ನೀಡಿದ ಬಳಿಕ ಅವರು ಮನೆಗಳಿಗೆ ತೆರಳಲು ಅನುಮತಿ ನೀಡಬೇಕು ಎಂದು ಫೋರಂ ಒತ್ತಾಯಿಸಿದೆ. ಬಣಸವಾಡಿ ರೈಲು ನಿಲ್ದಾಣದಲ್ಲಿಯೂ ಸ್ವ್ಯಾಬ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆಯ ರೈಲಿನಲ್ಲಿಯೇ ನೂರಾರು ಜನರು ಬೆಂಗಳೂರಿಗೆ ಆಗಮಿಸಿದ್ದಾರೆ.

           ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇರಳದಿಂದ ಬರುವವರಿಗೆ ಕೋವಿಡ್ ನಗೆಟಿವ್ ವರದಿ ಮಾತ್ರ ಕೇಳಲಾಗುತ್ತಿದೆ. ಸರ್ಕಾರದ ಕಡ್ಡಾಯ ಕ್ವಾರಂಟೈನ್ ಆದೇಶವಿದ್ದರೂ ಅದನ್ನು ಜಾರಿಗೆ ತರುವುದು ಹೇಗೆ? ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

          ರಸ್ತೆ ಮಾರ್ಗದಲ್ಲಿ ಕರ್ನಾಟಕಕ್ಕೆ ಆಗಮಿಸುವ ಜನರನ್ನು ಹೇಗೆ ಕ್ವಾರಂಟೈನ್ ಮಾಡಲಾಗುತ್ತದೆ? ಎಂದು ಸಹ ಗೊಂದಲ ಉಂಟಾಗಿದೆ. ಇನ್ನು ಪ್ರತಿನಿತ್ಯ ಕರ್ನಾಟಕ-ಕೇರಳ ನಡುವೆ ಸಂಚಾರ ನಡೆಸುವ ವಿದ್ಯಾರ್ಥಿಗಳು ಉದ್ಯೋಗಿಗಳು ಏನು ಮಾಡಬೇಬೇಕು? ಎಂಬುದಕ್ಕೆ ಸ್ಪಷ್ಟತೆ ಇಲ್ಲ.

ಕರ್ನಾಟಕ ಸರ್ಕಾರ ನರ್ಸಿಂಗ್, ವೈದ್ಯಕೀಯ, ಇಂಜಿನಿಯರಿಂಗ್, ಅರೆ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಕೇರಳದಿಂದ ಬರುವ 72 ಗಂಟೆಗಳ ಒಳಗಿನ ಅವಧಿಯ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ತರಬೇಕು ಎಂದು ಹೇಳಿದೆ. ಆಯಾ ವಿದ್ಯಾಸಂಸ್ಥೆಯವರು 7 ದಿನದ ಕ್ವಾರಂಟೈನ್‌ಗೆ ಒಳಪಡಿಸಿ ಪರೀಕ್ಷೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

                 ವಿದ್ಯಾರ್ಥಿಗಳು/ ಉದ್ಯೋಗಿಗಳ 7 ದಿನದ ಕಡ್ಡಾಯ ಕ್ವಾರಂಟೈನ್ ಅವಧಿಯಲ್ಲಿ ವೈದ್ಯಾಧಿಕಾರಿಗಳು ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಅನುಸರಣೆಗಾಗಿ ಮತ್ತು ನಿಗದಿತ ಸಮಯದಕ್ಕೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.

           


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries