HEALTH TIPS

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಕಾಸರಗೋಡು ಸರಕಾರಿ ಕಾಲೇಜಿಗೆ ದೇಶದಲ್ಲಿಯೇ 82 ನೆಯ ಸ್ಥಾನ.

                                      

         ಕಾಸರಗೋಡು: 2021 ರ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಇಲಾಖೆಯ ಮೌಲ್ಯಮಾಪನದಲ್ಲಿ ಕಾಸರಗೋಡು ಸರಕಾರಿ ಕಾಲೇಜು, ದೇಶದಲ್ಲಿಯೇ 82 ನೆಯ ಸ್ಥಾನವನ್ನು ಪಡೆದುಕೊಂಡು, ತನ್ನ ಶೈಕ್ಷಣಿಕ ಗುಣಮಟ್ಟದಿಂದಾಗಿ, ಗುರುತಿಸಿಕೊಂಡಿದೆ. ಕಣ್ಣೂರು  ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ, ಮೊದಲ ಸ್ಥಾನದಲ್ಲಿದೆ. 

           2015 ರಿಂದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು  (ಓIಖಈ) ಇಲಾಖೆಯು ದೇಶದ  ಶೈಕ್ಷಣಿಕ ಸಂಸ್ಥೆಗಳ ಶೈಕ್ಷಣಿಕ ಹಾಗೂ ಉಳಿದೆಲ್ಲ ಸಾಧನೆಗಳನ್ನು ಪರಿಗಣಿಸಿ, ಈ ರೀತಿಯಲ್ಲಿ ರೇಂಕಿಂಗ್ ವ್ಯವಸ್ಥೆಯನ್ನು ಮಾಡುತ್ತಿದೆ. ದೇಶದ ಮೊದಲ ನೂರು ಕಾಲೇಜುಗಳಲ್ಲಿ, ಕಾಸರಗೋಡು ಸರಕಾರಿ ಕಾಲೇಜು 82 ನೆಯ ಸ್ಥಾನದಲ್ಲಿದೆ. 

            ಎಲ್ಲಾ ವಿಭಾಗಗಳ ಉನ್ನತ ಫಲಿತಾಂಶ, ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಔದ್ಯೋಗಿಕ ಸ್ಥಾನಮಾನಕ್ಕಿರುವ ಹೆಚ್ಚಿನ ಸಾಧ್ಯತೆ, ಸರಕಾರದಿಂದ ಲಭ್ಯವಾಗುತ್ತಿರುವ ಆರ್ಥಿಕ ಅನುಕೂಲತೆಗಳ ಸಮರ್ಪಕ ಸದ್ಬಳಕೆ ಇತ್ಯಾದಿಗಳನ್ನು ಇಲ್ಲಿ ಪರಿಗಣಿಸಲಾಗಿದೆ. ಕೇರಳದ ಬಲುದೊಡ್ಡ ಕಾಲೇಜುಗಳಿಗಿಂತಲೂ ಉನ್ನತಸ್ಥಾನವನ್ನು ಕಾಸರಗೋಡು ಸರಕಾರಿ ಕಾಲೇಜು ಈ ಮೂಲಕ ಪಡೆದುಕೊಂಡಿದೆ. ಕಳೆದ ವರುಷ 11 ಕೋಟಿಗಿಂತಲೂ ಅಧಿಕ ಆರ್ಥಿಕ ಸಹಾಯವು ಕಾಲೇಜಿಗೆ ಲಭಿಸಿತ್ತು. 

               ಕಾಲೇಜಿನಲ್ಲಿ ಕಲಿಯುತ್ತಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸಾಧನೆಯು ಗಮನಾರ್ಹವಾದುದು. ಹಲವು ವಿಧಧ ವಿದ್ಯಾರ್ಥಿವೇತನ, ಶೈಕ್ಷಣಿಕ ಸೌಲಭ್ಯಗಳನ್ನು ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡು, ಉತ್ತಮ ಅಂಕಗಳೊಂದಿಗೆ ಶಿಕ್ಷಣವನ್ನು ಪೂರೈಸುತ್ತಿದ್ದಾರೆ. ಸಂಶೋಧನ ಪದವಿ ಪಡೆದ ಪ್ರಾಧ್ಯಾಪಕರ ಸಂಖ್ಯೆಯೂ ಇಲ್ಲಿ ಗಣನೀಯವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕಾಸರಗೋಡು ಸರಕಾರಿ ಕಾಲೇಜು ಸಾಧನೆಯ ಪಟ್ಟಿಯಲ್ಲಿ ಮುಂದೆ ನಿಂತಿದೆ. 

                 ಕಾಲೇಜಿನಲ್ಲಿ ಕಲಿಯುತ್ತಿರುವ ಬಹುಭಾಗ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು. ಹೆಚ್ಚಿನವರೂ ಆರ್ಥಿಕವಾಗಿ ಹಿಂದುಳಿದವರು.  ಹಲವು ದಿವ್ಯಾಂಗ ವಿದ್ಯಾರ್ಥಿಗಳು ಇದ್ದಾರೆ. ಇಂತಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುತ್ತಿರುವ ಸರಕಾರಿ ಕಾಲೇಜು ಎಂಬ ನೆಲೆಯಲ್ಲಿಯೂ ಕಾಸರಗೋಡು ಸರಕಾರಿ ಕಾಲೇಜು ಈ ರೇಂಕ್ ಪಟ್ಟಿಯಲ್ಲಿ ನೂರರ ಒಳಗಿನ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದು ಕಾಸರಗೋಡಿಗೆ ಹೆಮ್ಮೆಯ ವಿಷಯ.

                  ಕಾಲೇಜಿನ ಆಡಳಿತ ವರ್ಗ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ರಕ್ಷಕ ಶಿಕ್ಷಕ ಸಮಿತಿ, ವಿದ್ಯಾರ್ಥಿಗಳು, ಹಾಗೂ ಜನಪ್ರತಿನಿಧಿಗಳ , ಹಳೆವಿದ್ಯಾರ್ಥಿಗಳ ಮತ್ತು ಊರವರ ದುಡಿಮೆ, ಸಹಾಯ ಸಹಕಾರ ಇವೆಲ್ಲವೂ ಕಾಲೇಜಿನ ಈ ಸಾಧನೆಗೆ ಕಾರಣವಾಗಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries