HEALTH TIPS

ಜಾಗತಿಕ ತಾಪಮಾನ ಏರಿಕೆ: 10 ವರ್ಷದಲ್ಲಿ14% ಹವಳ ದಿಬ್ಬಗಳ ನಾಶ

                        ಸಿಡ್ನಿ: ಜಾಗತಿಕ ತಾಪಮಾನ ಏರಿಕೆಯು 2009ರಿಂದ 2018ರ ಅವಧಿಯಲ್ಲಿ ಜಗತ್ತಿನ 14% ಹವಳದ ದಿಬ್ಬಗಳು ನಾಶವಾಗಲು ಕಾರಣವಾಗಿದೆ. ತಾಪಮಾನ ಏರಿಕೆ ಸಮಸ್ಯೆ ಇನ್ನಷ್ಟು ಹೆಚ್ಚಿದರೆ ನೀರಿನಡಿಯ ಪರಿಸರ ವ್ಯವಸ್ಥೆ ಸಂಪೂರ್ಣ ನಾಶವಾಗಲಿದೆ ಎಂದು ಹವಳಜೀವಿಗಳಿಗೆ ಸಂಬಂಧಿಸಿದ ಬೃಹತ್ ಸವಿುೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

            ದಕ್ಷಿಣ ಏಶ್ಯಾ ಮತ್ತು ಪೆಸಿಫಿಕ್, ಅರೇಬಿಯನ್ ಪರ್ಯಾಯದ್ವೀಪ ಜಾಗತಿಕ ತಾಪಮಾನ ಏರಿಕೆಯಿಂದ ಅತೀ ಹೆಚ್ಚು ಪರಿಣಾಮಕ್ಕೊಳಗಾಗಿದೆ ಎಂದು ಜಾಗತಿಕ ಹವಳ ದಿಬ್ಬ ಪರಿವೀಕ್ಷಣಾ ಜಾಲದ 300ಕ್ಕೂ ಅಧಿಕ ವಿಜ್ಞಾನಿಗಳು ಸಿದ್ಧಪಡಿಸಿದ ವರದಿ ತಿಳಿಸಿದೆ. ಸುಮಾರು 11,700 ಕಿ.ಮೀ ಹವಳದ ದಿಬ್ಬ ನಾಶವಾಗಿದೆ ಎಂದು 73 ದೇಶಗಳು ಮತ್ತು 12,000 ಪ್ರದೇಶಗಳಲ್ಲಿನ 40 ವರ್ಷಗಳ ಅಂಕಿಅಂಶಗಳನ್ನು ಆಧರಿಸಿ ನಡೆಸಿದ ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

              ಹವಾಮಾನ ಬದಲಾವಣೆ ವಿಶ್ವದಲ್ಲಿನ ಹವಳ ಜೀವಿ(ಮೃದ್ವಂಗಿಗಳು)ಗಳ ಬದುಕಿಗೆ ಅತೀ ದೊಡ್ಡ ಬೆದರಿಕೆಯಾಗಿದೆ ಎಂದು ಆಸ್ಟ್ರೇಲಿಯನ್ ಇನ್ಸಿಟ್ಯೂಟ್ ಆಫ್ ಮರೈನ್ ಸೈಯನ್ಸಸ್ನ ಸಿಇಒ, ವರದಿಯ ಸಹ ಲೇಖಕ ಪಾಲ್ ಹಾರ್ಡಿಸ್ಟಿ ಹೇಳಿದ್ದಾರೆ. ಸಮುದ್ರದ ಅಡಿಭಾಗದಲ್ಲಿ ಕೇವಲ 0.2% ಪ್ರದೇಶದಲ್ಲಿ ಮಾತ್ರ ವ್ಯಾಪಿಸಿರುವ ಹವಳದ ದಿಬ್ಬಗಳು, 24%ದಷ್ಟು ಸಸ್ಯ ಹಾಗೂ ಸಮುದ್ರದ ಸಣ್ಣಜೀವಿಗಳ ವಾಸಸ್ಥಾನವಾಗಿದೆ. ಸಮುದ್ರದ ಪರಿಸರ ವ್ಯವಸ್ಥೆಗೆ ಆಧಾರವಾಗಿರುವ ಜೊತೆಗೆ, ವಿಶ್ವದೆಲ್ಲೆಡೆಯ ನೂರಾರು ಮಿಲಿಯನ್ ಜನತೆಗೆ ಆಹಾರ, ಉದ್ಯೋಗದ ಜೊತೆಗೆ, ಕಡಲಕೊರೆತದಿಂದ ರಕ್ಷಣೆಯನ್ನೂ ಒದಗಿಸುತ್ತವೆ. ಹವಳ ದಿಬ್ಬಗಳ ನಾಶಕ್ಕೆ ಹವಳಗಳು ಬಣ್ಣಗೆಡುವುದು ಮುಖ್ಯ ಕಾರಣವಾದರೆ, ಮಿತಿಮೀರಿದ ಮೀನುಗಾರಿಕೆ, ಅಸಮರ್ಥ ಕಡಲತೀರ ಅಭಿವೃದ್ಧಿ ಯೋಜನೆ, ನೀರಿನ ಗುಣಮಟ್ಟ ಕುಸಿತ ಇತರ ಕಾರಣಗಳು ಎಂದು ಹಾರ್ಡಿಸ್ಟಿ ಹೇಳಿದ್ದಾರೆ.

               ಹಸಿರುಮನೆ ಅನಿಲ ಹೊರಹೊಮ್ಮುವಿಕೆಯ ಹೆಚ್ಚುವರಿ ಶಾಖದ 90%ದಷ್ಟನ್ನು ಸಮುದ್ರಗಳು ಹೀರಿಕೊಳ್ಳುತ್ತವೆ. ಸಮುದ್ರದ ನೀರು ಬಿಸಿಯಾದಾಗ ಅದರ ಒತ್ತಡದಿಂದ ಸಮುದ್ರದಡಿಯ ಹವಳದ ದಿಬ್ಬಗಳು ಬಿಳುಚಿಕೊಂಡು ಬಣ್ಣಗೆಡುತ್ತವೆ ಎಂದು ವರದಿ ಹೇಳಿದೆ.‌


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries