HEALTH TIPS

ಏರ್ ಇಂಡಿಯಾಗೆ ಸರ್ಕಾರದಿಂದ 16 ಸಾವಿರ ಕೋಟಿ ರೂ ಬಿಲ್ ಪಾವತಿ ಬಾಕಿ!

            ನವದೆಹಲಿಟಾಟಾ ಸಮೂಹದ ತೆಕ್ಕೆಗೆ ಜಾರಿರುವ ಏರ್ ಇಂಡಿಯಾಗೆ ಕೇಂದ್ರ ಸರ್ಕಾರ ಸುಮಾರು 16 ಸಾವಿರ ಕೋಟಿ ರೂ ಬಿಲ್ ಪಾವತಿ ಮಾಡಬೇಕಿದ್ದು, ಶೀಘ್ರದಲ್ಲೇ ಅದನ್ನು ಪಾವತಿ ಮಾಡುವ ಕುರಿತು ಕೇಂದ್ರ ಸರ್ಕಾರ ಟಾಟಾ ಸಂಸ್ಥೆಗೆ ಪತ್ರವೊಂದನ್ನು ಬರೆದಿದೆ.

            ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 'ಏರ್​ ಇಂಡಿಯಾದಿಂದ ಬಾಕಿ ಉಳಿದಿರುವ 16,000 ಕೋಟಿ ರೂಪಾಯಿಯಷ್ಟು ಇಂಧನ ಬಿಲ್​ಗಳು ಮತ್ತು ಪೂರೈಕೆದಾರರಿಗೆ ಪಾವತಿ ಮಾಡಬೇಕಿರುವ ಇತರ ಬಾಕಿಯನ್ನು ಸರ್ಕಾರವು ವರ್ಗಾವಣೆ ಮಾಡಲಿದೆ. ನಷ್ಟ ಅನುಭವಿಸುತ್ತಿರುವ ಏರ್​ ಇಂಡಿಯಾವನ್ನು ಸ್ಪೆಷಲ್ ಪರ್ಪಸ್ ವೆಹಿಕಲ್​ನಲ್ಲಿ ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡುವ ಮುನ್ನ ಸರ್ಕಾರದಿಂದ ಈ ವರ್ಗಾವಣೆಯನ್ನು ಮಾಡಲಾಗುವುದು ಎಂದು ಹೇಳಲಾಗಿದೆ.

           ಕಳೆದ ಶುಕ್ರವಾರದಂದು ಸರ್ಕಾರವು ಘೋಷಣೆ ಮಾಡಿದ ಪ್ರಕಾರ, ಟಾಟಾ ಸಮೂಹವು ಏರ್​ ಇಂಡಿಯಾಗಾಗಿ 18,000 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು. ಆಗಸ್ಟ್ 31ಕ್ಕೆ ಏರ್​ ಇಂಡಿಯಾಗೆ ಒಟ್ಟಾರೆ ಸಾಲ 61,562 ಕೋಟಿ ರೂಪಾಯಿ ಇತ್ತು. ಟಾಟಾ ಸಮೂಹವು ಏರ್​ ಇಂಡಿಯಾದ 15,300 ಕೋಟಿ ರೂಪಾಯಿ ಸಾಲವನ್ನು ತೆಗೆದುಕೊಳ್ಳಲಿದೆ. ಬಾಕಿ 46,262 ಕೋಟಿ ರೂಪಾಯಿಯನ್ನು ಸರ್ಕಾರದ ಏರ್​ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (AIAHL) ತೆಗೆದುಕೊಳ್ಳಲಿದೆ. ಏರ್​ಲೈನ್ಸ್​ನ ಅರ್ಧದ ತನಕ ಸಾಲವನ್ನು ಹೋಲ್ಡ್ ಮಾಡಲು ವಿಶೇಷ ಕಂಪೆನಿ ಸ್ಥಾಪನೆ ಮಾಡಲಾಗುವುದು. ಇದರಲ್ಲಿ ನಾಲ್ಕು ಘಟಕ ಮತ್ತು ನಾನ್-ಕೋರ್ ಆಸ್ತಿಯು ಇರಲಿದೆ.

           ಅಂತೆಯೇ ಟಾಟಾ ಸಮೂಹದಿಂದ ಸರ್ಕಾರಕ್ಕೆ 2700 ಕೋಟಿ ರೂಪಾಯಿ ನಗದಾಗಿ ಪಾವತಿಸಬೇಕಾಗುತ್ತದೆ.

              2019ರಲ್ಲಿ ಏರ್​ ಇಂಡಿಯಾ ಮಾರಾಟಕ್ಕಾಗಿ ಸರ್ಕಾರದಿಂದ ಸ್ಪೆಷಲ್ ಪರ್ಪಸ್ ವೆಹಿಕಲ್- AIAHL ಸ್ಥಾಪಿಸಲಾಯಿತು. ಸಾಲವನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಏರ್​ ಇಂಡಿಯಾ ಸಮೂಹದ ನಾನ್ ಕೋರ್ ಆಸ್ತಿಗಾಗಿ ಇದರ ಸ್ಥಾಪನೆ ಮಾಡಲಾಗಿತು. AIAHLದಿಂದ ಟಾಟಾ ಸಮೂಹ ಪಾವತಿಸದ ಸಾಲದ ಶೇ 75ರಷ್ಟು ಪಡೆದುಕೊಳ್ಳಲಿದೆ. ಸಾಲದ ಹೊರತಾಗಿ ಏರ್​ ಇಂಡಿಯಾಗೆ ಸೇರಿದ ಭೂಮಿ, ಕಟ್ಟಡ 14,718 ರೂಪಾಯಿ ಮೌಲ್ಯದ ನಾನ್-ಕೋರ್​ ಆಸ್ತಿಗಳನ್ನು AIAHLಗೆ ವರ್ಗಾವಣೆ ಮಾಡಲಾಗುತ್ತದೆ. ಹೆಚ್ಚುವರಿಯಾದ ಸಾಲ AIAHLಗೆ ವರ್ಗಾವಣೆ ಆಗುತ್ತದೆ. ಅದರಲ್ಲಿ ತೈಲ ಕಂಪೆನಿಗಳಿಗೆ ಬಾಕಿ ಉಳಿಸಿಕೊಂಡ ಇಂಧನ ಬಿಲ್​ಗಳು, ವಿಮಾನ ನಿಲ್ದಾಣ ಆಪರೇಟರ್​ಗಳು ಮತ್ತು ಪೂರೈಕೆದಾರರಿಗೆ ಬಾಕಿ ಇರುವುದನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಖಾಸಗೀಕರಣ ಕಾರ್ಯಕ್ರಮದ ಪ್ರಮುಖ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

          'ಈ ಬಾಕಿಯು ಡಿಸೆಂಬರ್​ ಕೊನೆಗೆ ಜಾಸ್ತಿಯಾಗುವ ಯಾವ ನಿರೀಕ್ಷೆಯೂ ಇಲ್ಲ. ಏರ್ ಲೈನ್ಸ್ ಕಾರ್ಯ ನಿರ್ವಹಣೆಗೆ ಅಗತ್ಯ ಇರುವಂತೆ ದಿನಕ್ಕೆ 20 ಕೋಟಿ ರೂಪಾಯಿಯನ್ನು ಸರ್ಕಾರ ಪಾವತಿ ಮಾಡಲಿದೆ. ಏರ್​ಇಂಡಿಯಾವನ್ನು ಟಾಟಾಗೆ ಹಸ್ತಾಂತರವನ್ನು ಮಾಡುವ ಮುನ್ನ ಬ್ಯಾಲೆನ್ಸ್ ಶೀಟ್​ ಮೇಲೆ ಸೆಪ್ಟೆಂಬರ್​ನಿಂದ ಡಿಸೆಂಬರ್ ತನಕ ಮತ್ತೆ ಕೆಲಸ ಮಾಡಬೇಕಿದೆ. ಈ ಸಂದರ್ಭದಲ್ಲಿ ಉದ್ಭವಿಸುವ ಸಾಲವನ್ನು AIAHLಗೆ ವರ್ಗಾವಣೆ ಮಾಡಲಾಗುವುದು. ಇಂಧನ ಖರೀದಿ ಮತ್ತು ಇತರ ದೈನಂದಿನ ಕಾರ್ಯ ಚಟುವಟಿಕೆಗಳಿಗಾಗಿ ಆಗಸ್ಟ್ 31ಕ್ಕೆ ಕೊನೆಯಾದ ಅವಧೀಗೆ 15,834 ಕೋಟಿ ರೂಪಾಯಿ ಆಪರೇಷನಲ್ ಕ್ರೆಡಿಟರ್ಸ್​ಗೆ ಪಾವತಿಸಬೇಕಾಗುತ್ತದೆ. ಅದು ಕೂಡ AIAHLಗೆ ವರ್ಗಾವಣೆ ಆಗುತ್ತದೆ ಎಂದು ಪಾಂಡೆ ಹೇಳಿದರು.

            ಏರ್​ಇಂಡಿಯಾ ಹಾರಾಟಕ್ಕಾಗಿ ಸರ್ಕಾರವು ನಿತ್ಯ ರೂ. 20 ಕೋಟಿ ಖರ್ಚು ಮಾಡುತ್ತಿದೆ. ಹೆಚ್ಚುವರಿಯಾಗಿ ಬ್ಯಾಲೆನ್ಸ್​ಶೀಟ್​ನಲ್ಲಿ ಇರುವ ಸಾಲವು ಏರ್​ಇಂಡಿಯಾದ ಈಕ್ವಿಟಿ ಮೌಲ್ಯವನ್ನು (-) 32,000 ಕೋಟಿ ರೂಪಾಯಿ ಮಾಡಿದೆ. ಈ ಕಾರಣಕ್ಕೆ ಸರ್ಕಾರವು ಒಂದೋ ಏರ್​ಇಂಡಿಯಾವನ್ನು ಖಾಸಗೀಕರಣ ಮಾಡಬೇಕಾಗಿತ್ತು ಅಥವಾ ಮುಚ್ಚಬೇಕಿತ್ತು. 2009-10ರಿಂದ ಇಲ್ಲಿಯ ತನಕ ಸರ್ಕಾರವು ಏರ್​ಲೈನ್​ಗೆ 1.10 ಲಕ್ಷ ಕೋಟಿ ರೂಪಾಯಿಯಷ್ಟು ಪೂರೈಸಿದೆ. ಇದರಲ್ಲಿ 54,584 ಕೋಟಿ ರೂ. ನಗದು ಬೆಂಬಲ ಮತ್ತು 55,692 ಕೋಟಿ ರೂ. ಸಾಲದ ಖಾತ್ರಿ ಒಳಗೊಂಡಿದೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries