ತಿರುವನಂತಪುರಂ: ಭಾರೀ ಮಳೆಯಿಂದ ರಾಜ್ಯದಲ್ಲಿ ವ್ಯಾಪಕ ಬೆಳೆ ಹಾನಿಯಾಗಿದೆ. ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. ಆರಂಭಿಕ ನಷ್ಟವು ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಭಾರೀ ಮಳೆಗೆ 1476 ಹೆಕ್ಟೇರ್ ಬೆಳೆ ನಾಶವಾಗಿದೆ. ಆರಂಭಿಕ ನಷ್ಟ ಅಂದಾಜು 28.58 ಕೋಟಿ ರೂ. ಎಂದೆನ್ನಲಾಗಿದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ.
ಕೊಟ್ಟಾಯಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಹಾನಿಯಾಗಿದೆ. ತ್ರಿಶೂರ್ ನಲ್ಲಿ 553 ಹೆಕ್ಟೇರ್ ಬೆಳೆ ನಾಶವಾಗಿದೆ. ಮಳೆಯು 2965 ರೈತ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಿತು. ಇಲ್ಲಿ 9.56 ಕೋಟಿ ನಷ್ಟವಾಗಿದೆ. ಕೊಟ್ಟಾಯಂನಲ್ಲಿ 510 ಹೆಕ್ಟೇರ್ ಬೆಳೆ ನಾಶವಾಗಿದೆ. ಪ್ರಾಥಮಿಕ ವರದಿಯ ಪ್ರಕಾರ 1018 ರೈತರು 7.73 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ರಾಜಧಾನಿ ತಿರುವನಂತಪುರಂನಲ್ಲಿ 121.51 ಹೆಕ್ಟೇರ್ ಭೂಮಿ ನಾಶವಾಗಿದೆ. 1550 ರೈತರು ಬಾಧಿತರಾಗಿದ್ದಾರೆ. ನಷ್ಟ ಅಂದಾಜು ರೂ 3.89 ಕೋಟಿ. ಕೊಲ್ಲಂನಲ್ಲಿ 89.32 ಹೆಕ್ಟೇರ್ ಬೆಳೆ ನಾಶವಾಗಿದೆ. 941 ರೈತರು 2.21 ಕೋಟಿ ರೂ. , ಪತ್ತನಂತಿಟ್ಟದಲ್ಲಿ 315 ರೈತರು 59 ಹೆಕ್ಟೇರ್ ಬೆಳೆ ಕಳೆದುಕೊಂಡಿದ್ದು, 1.22 ಕೋಟಿ ರೂಪಾಯಿ ನಷ್ಟವಾಗಿದೆ.
ಆಲಪ್ಪುಳದಲ್ಲಿ 16 ರೈತ ಕುಟುಂಬಗಳ 50 ಹೆಕ್ಟೇರ್ ಬೆಳೆ ನಾಶವಾಗಿದೆ. ಆರಂಭಿಕ ನಷ್ಟ 1.37 ಕೋಟಿ ರೂ. ಎರ್ನಾಕುಳಂನಲ್ಲಿ 47.30 ಹೆಕ್ಟೇರ್ ಬೆಳೆ ನಾಶವಾಗಿದೆ. 42 ರೈತರು 22 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ. ಇಡುಕ್ಕಿಯಲ್ಲಿ 22 ಹೆಕ್ಟೇರ್ ಬೆಳೆ ನಾಶವಾಗಿದೆ. 115 ರೈತರು ಬಾಧಿತರಾಗಿದ್ದಾರೆ. 1.90 ಕೋಟಿ ನಷ್ಟ ಅಂದಾಜಿಸಲಾಗಿದೆ.
ಮಲಪ್ಪುರಂ ಜಿಲ್ಲೆಯಲ್ಲಿ 14.20 ಹೆಕ್ಟೇರ್ ಬೆಳೆ ನಾಶವಾಗಿದೆ. ನಷ್ಟ 29 ಲಕ್ಷ ರೂ. 93 ರೈತರಿಗೆ ಪರಿಣಾಮ ಬೀರಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ 8.20 ಹೆಕ್ಟೇರ್ ಹಾನಿಯಾಗಿದೆ. 41 ರೈತರು 12 ಲಕ್ಷ ರೂ. ಕಳಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 1.50 ಹೆಕ್ಟೇರ್ ಬೆಳೆ ನಾಶವಾಗಿದೆ. ಆರು ರೈತರು 2.25 ಲಕ್ಷ ರೂ. ಕಳಕೊಂಡಿದ್ದಾರೆ. ಕಣ್ಣೂರಿನಲ್ಲಿ ಅತಿ ಕಡಿಮೆ 0.40 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಎಂಟು ರೈತರಿಗೆ ರೂ 85,000 ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

