HEALTH TIPS

ಕೊರೊನಾ: ರಾಜ್ಯದಲ್ಲಿ ಇಂದು 7167 ಮಂದಿಗೆ ಸೋಂಕು ಪತ್ತೆ: 65,158 ಮಾದರಿಗಳ ಪರೀಕ್ಷೆ: TPR ಶೇ. 10.99


         ತಿರುವನಂತಪುರಂ: ರಾಜ್ಯದಲ್ಲಿ ಇಂದು 7167. ಮಂದಿ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.  ಎರ್ನಾಕುಳಂ 1046, ತಿರುವನಂತಪುರ 878, ತ್ರಿಶೂರ್ 753, ಕೋಝಿಕ್ಕೋಡ್ 742, ಕೊಲ್ಲಂ 592, ಇಡುಕ್ಕಿ 550, ಕೊಟ್ಟಾಯಂ 506, ಪತ್ತನಂತಿಟ್ಟ 447, ಪಾಲಕ್ಕಾಡ್ 339, ಮಲಪ್ಪುರಂ 334, ಕಣ್ಣೂರು 304, ಆಲಪ್ಪುಳ 270, ವಯನಾಡ್ 269, ಕಾಸರಗೋಡು 137 ಎಂಬಂತೆ ಸೋಂಕು ದೃಢೀಕರಿಸಲಾಗಿದೆ.
         ಕಳೆದ 24 ಗಂಟೆಗಳಲ್ಲಿ 65,158 ಮಾದರಿಗಳನ್ನು ಪರೀಕ್ಷಿಸಲಾಗಿದೆ.  10ಕ್ಕಿಂತ ಹೆಚ್ಚಿನ ವಾರದ ಸೋಂಕು ಅನುಪಾತ (wpr )  ಇರುವ  77 ಸ್ಥಳೀಯ ಸಂಸ್ಥೆಗಳಲ್ಲಿ  115 ಪ್ರದೇಶಗಳಿವೆ.  ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,72,248 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 2,64,972 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 7,276 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  ಒಟ್ಟು 515 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
       ಪ್ರಸ್ತುತ, 79,185 ಕೊರೋನಾ ಪ್ರಕರಣಗಳಲ್ಲಿ, ಕೇವಲ 8% ವ್ಯಕ್ತಿಗಳು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 
         ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 1ಮೃತರಾಗಿದ್ದಾರೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ ಏಳು ಸಾವುಗಳು ಮತ್ತು ಕಳೆದ ಜೂನ್ 18 ರವರೆಗೆ 146 ಸಾವುಗಳು ಸಮರ್ಪಕ ದಾಖಲೆಗಳ ಕೊರತೆಯಿಂದ ದೃಢೀಕರಿಸಲ್ಪಟ್ಟಿಲ್ಲ ಎಂದು ಸುಪ್ರೀಂ ಕೋರ್ಟ್ ವರದಿ ಮಾಡಿದೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 31,681ಕ್ಕೆ ಏರಿಕೆಯಾಗಿದೆ.
       ಇಂದು ಸೋಂಕು ಪತ್ತೆಯಾದವರಲ್ಲಿ 25 ಮಂದಿ ಹೊರ ರಾಜ್ಯದವರು.  6879 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  221 ಮಂದಿ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 42 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
        ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 6439 ಮಂದಿ ರೋಗಿಗಳು ಗುಣಮುಖರಾಗಿದ್ದಾರೆ.  ತಿರುವನಂತಪುರ 754, ಕೊಲ್ಲಂ 848, ಪತ್ತನಂತಿಟ್ಟ 406, ಆಲಪ್ಪುಳ 455, ಕೊಟ್ಟಾಯಂ 155, ಇಡುಕ್ಕಿ 195, ಎರ್ನಾಕುಲಂ 918, ತ್ರಿಶೂರ್ 38, ಪಾಲಕ್ಕಾಡ್ 423, ಮಲಪ್ಪುರಂ 560, ಕೋಝಿಕ್ಕೋಡ್ 760, ವಯನಾಡ್  329, ಕಣ್ಣೂರು 451 ಕಾಸರೂರು 147 ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ 79,185 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 48,57,181 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries