HEALTH TIPS

ಸ್ವಾತಂತ್ರ್ಯ@75 ನಗರಗಳ ನವ ಭಾರತ: ಮೇಳ ಉದ್ಘಾಟಿಸಿದ ಮೋದಿ

                 ಲಕ್ನೋ: ಸ್ವಾತಂತ್ರ್ಯ@75 ನಗರಗಳ ನವ ಭಾರತ: ಬದಲಾಗುತ್ತಿರುವ ನಗರಗಳ ಚಿತ್ರಣ ಸಮ್ಮೇಳನ ಮತ್ತು ಮೇಳವನ್ನು ಉತ್ತರಪ್ರದೇಶದ ಲಕ್ನೋ ನಗರದಲ್ಲಿರುವ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.


                ನಂತರ ಪ್ರಧಾನ ಮಂತ್ರಿ ಅವಾಸ್‌ ಯೋಜನಾ ನಗರ ಪ್ರದೇಶದ ಮನೆಗಳನ್ನು 75 ಸಾವಿರ ಫಲಾನುಭವಿಗಳಿಗೆ ಡಿಜಿಟಲ್‌ ಮೂಲಕ ಮನೆ ಕೀಲಿಗಳನ್ನು ಹಸ್ತಾಂತರಿಸಿದರು. ಉತ್ತರ ಪ್ರದೇಶದ ಫಲಾನುಭವಿಗೆ ಕೀಲಿ ಹಸ್ತಾಂತರಿಸುವುದರ ಜೊತೆಗೆ 75 ನಗರ ಅಭಿವೃದ್ಧಿ ಯೋಜನೆಗಳಿ ಶಿಲಾನ್ಯಾಸ ಮಾಡಿದರು. ಸ್ಮಾರ್ಟ್‌ ಸಿಟಿ ಮಿಷನ್‌ ಹಾಗೂ ಅಮೃತ್‌ ಯೋಜನೆ ಅಡಿಯಲ್ಲಿ 75 ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡಿದರು.

               ಲಖನೌ, ಕಾನ್‌ಪುರ, ವಾರಾಣಸಿ, ಪ್ರಯಾಗರಾಜ್‌, ಗೋರಖ್‌ಪುರ, ಝಾನ್ಸಿ, ಗಾಝಿಯಾಬಾದ್‌ಗಳಿಗೆ ಒಳಗೊಂಡಂತೆ ಈ ಬಸ್‌ ಸೇವೆಯನ್ನು ಆರಂಭಿಸಲಾಗುವುದು. ವಸತಿ ಮತ್ತು ನಗರ ಅಭಿವೃದ್ಧಿ ಸಚಿವಾಲಯದ ವಿವಿಧ 75 ಯೋಜನೆಗಳ ಮೇಲೆ ಬೆಳಕು ಚೆಲ್ಲುವ ಕಾಫಿ ಟೇಬಲ್‌ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಈ ಮೇಳದಲ್ಲಿ ಆಯೋಜಿಸಲಾಗಿರುವ ವಿವಿಧ ಮೂರು ಮೇಳಗಳಿಗೆ ಭೇಟಿ ನೀಡಲಿದ್ದು, ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿಶ್ವವಿದ್ಯಾಲಯದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪೀಠ ಸ್ಥಾಪನೆಯ ಕುರಿತು ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.

ಕೇಂದ್ರ ರಕ್ಷಣಾ ಸಚಿವ, ಕೇಂದ್ರ ಗೃಹ ಮತ್ತು ನಗರ ಅಭಿವೃದ್ಧಿ ಸಚಿವರು ರಾಜ್ಯಪಾಲರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

                                             ಸಭೆ ಮತ್ತು ಮೇಳದ ಕುರಿತು:

        ಈ ಸಭೆ ಮತ್ತು ಮೇಳವನ್ನು ಗೃಹ ಹಾಗೂ ನಗರ ಅಭಿವೃದ್ಧಿ ಸಚಿವಾಲಯವು ಆಯೋಜಿಸಿದೆ. ಅ.5ರಿಂದ 7ರವರೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆಯ ಅಡಿಯಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಉತ್ತರ ಪ್ರದೇಶ ರಾಜ್ಯದ ನಗರ ಪ್ರದೇಶಗಳ ಬದಲಾಗುತ್ತಿರುವ ಚಿತ್ರಣಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುವಂತೆ ಈ ಸಭೆಯನ್ನು ಹಾಗೂ ಮೇಳವನ್ನು ಆಯೋಜಿಸಲಾಗಿದೆ. ಅಭಿವೃದ್ಧಿಯ ಮುಂದಿನ ಹೆಜ್ಜೆ, ಪಾಲ್ಗೊಳ್ಳುವಿಕೆ, ಬದ್ಧತೆ ಹಾಗೂ ಕಾರ್ಯಾನುಷ್ಠಾನಗಳ ದಿಕ್ಕನ್ನು ನಿರ್ಧರಿಸುವ ಸಭೆ ಮತ್ತು ಮೇಳ ಇದಾಗಲಿದೆ.

ಮೂರು ಪ್ರದರ್ಶನ ಮೇಳಗಳನ್ನು ಈ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆ ಮತ್ತು ಪ್ರದರ್ಶನ ಮೇಳ ಅ. 6 ಹಾಗೂ 7 ಎರಡು ದಿನಗಳೂ ಸಾರ್ವಜನಿಕರ ಭೇಟಿಗೆ ಮುಕ್ತವಾಗಿವೆ.

1. ನಗರಗಳ ನವಭಾರತ ಎಂಬ ಹೆಸರಿನ ಅಡಿ, ನಗರ ಅಭಿಯಾನಗಳ ಆಯೋಜನೆಗಳ ಕುರಿತು ಹೆಚ್ಚು ವಿವರಿಸುವ ಮೇಳ ಹಮ್ಮಿಕೊಳ್ಳಲಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಗೃಹಸಂಬಂಧಿ ಯೋಜನೆಗಳು ಹಾಗೀ ನಗರಾಭಿವೃದ್ಧಿ ಯೋಜನೆಗಳಿಂದಾದ ಬದಲಾವಣೆಗಳ ಕುರಿತು ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ.

2. ನಿರ್ಮಾಣ ತಂತ್ರಜ್ಞಾನದಲ್ಲಿ ನೂತನ 75 ತಂತ್ರಗಳನ್ನು ಪ್ರದರ್ಶಿಸುವ ಭಾರತೀಯ ಮನೆ ತಂತ್ರಜ್ಞಾನ ಮೇಳ ಎಂಬ ಹೆಸರಿನಲ್ಲಿ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ. ಜಾಗತಿಕ ಮನೆ ತಂತ್ರಜ್ಞಾನ ಸವಾಲುಗಳು ಇಂಡಿಯಾ ಸಂಸ್ಥೆಯ ಅಡಿಯಲ್ಲಿ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಬಂದಿರುವ ನೂತನ ತಂತ್ರಜ್ಞಾನ, ಯಂತ್ರೋಪಕರಣಗಳು, ಹೊಸಬಗೆಯ ಪ್ರಕ್ರಿಯೆಗಳನ್ನು ಪ್ರದರ್ಶಿಸಲಾಗುತ್ತದೆ.

3. 2017ರ ನಂತರ ಉತ್ತರ ಪ್ರದೇಶದ ಸ್ಥಿತಿಗತಿ ಹಾಗೂ ಬದಲಾದ ಪರಿಸ್ಥಿತಿಗಳನ್ನು ತೋರಿಸುವ ನಗರಾಭಿವೃದ್ಧಿಯೋಜನೆಗಳನ್ನು ವಿವರಿಸುವ ಯುಪಿ@75 ಹೆಸರಿನಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಬಿಂಬಿಸಲಾಗುತ್ತದೆ.

              ಈ ಮೂರೂ ಮೇಳಗಳು, ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯ ಹಮ್ಮಿಕೊಂಡಿರುವ ಯೋಜನೆಗಳ ಅಡಿಯಲ್ಲಿ ಆಗಿರುವ ಸುಧಾರಣೆ ಹಾಗೂ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ. ಈ ಮೂರು ಮೇಳಗಳನ್ನು ಸ್ವಚ್ಛನಗರ, ಜಲ ಸುರಕ್ಷಾ ನಗರ ಹಾಗೂ ಸರ್ವರಿಗೂ ಸೂರು, ನೂತನ ನಿರ್ಮಾಣ ತಂತ್ರಗಳು, ಸ್ಮಾರ್ಟ್‌ ಸಿಟಿ ಅಭಿವೃದ್ಧಿ, ಸುಸ್ಥಿರ ಚಲನೆ ಹಾಗೂ ನಗರ ಪ್ರದೇಶದಲ್ಲಿ ಜೀವನಾವಕಾಶಗಳು ಎಂಬ ವಿಷಯಾಧಾರಿತವಾಗಿ ಆಯೋಜಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries