HEALTH TIPS

ರಾಜ್ಯದಲ್ಲಿ ಇಂದು 8538 ಮಂದಿಗೆ ಕೋವಿಡ್ ಪತ್ತೆ: 11,366 ಮಂದಿ ಗುಣಮುಖ: 79,100 ಮಾದರಿಗಳ ಪರೀಕ್ಷೆ 10.79 ಶೇ.ಟಿ.ಪಿ.ಆರ್

                       ತಿರುವನಂತಪುರ: ರಾಜ್ಯದಲ್ಲಿ ಇಂದು 8538 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1481, ತಿರುವನಂತಪುರ 1210, ತ್ರಿಶೂರ್ 852, ಕೊಟ್ಟಾಯಂ 777, ಕೋಝಿಕ್ಕೋಡ್ 679, ಇಡುಕ್ಕಿ 633, ಕೊಲ್ಲಂ 554, ಮಲಪ್ಪುರಂ 430, ಕಣ್ಣೂರು 419, ಪಾಲಕ್ಕಾಡ್ 352, ಪತ್ತನಂತಿಟ್ಟ 348, |ಆಲಪ್ಪುಳ 333, ವಯನಾಡ್ 311, ಕಾಸರಗೋಡು 159 ಎಂಬಂತೆ ಸೋಂಕು ಬಾಧಿಸಿದೆ.

                   ಕಳೆದ 24 ಗಂಟೆಗಳಲ್ಲಿ 79,100 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ 10 ಕ್ಕಿಂತ ಹೆಚ್ಚಿನ 158 ಸ್ಥಳೀಯ ಸಂಸ್ಥೆಗಳಲ್ಲಿ 211 ವಾರ್ಡ್‍ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.

               ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2,69,881 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವರಲ್ಲಿ 2,61,252 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 8,629 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಒಟ್ಟು 545 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

                 ಪ್ರಸ್ತುತ, 77,363 ಕೋವಿಡ್ ಪ್ರಕರಣಗಳಲ್ಲಿ, ಶೇಕಡಾ 10 ರಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

           ಕಳೆದ 24 ಗಂಟೆಗಳಲ್ಲಿ  71 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಕಳೆದ ಜೂನ್ 18 ರವರೆಗೆ ಸಮರ್ಪಕ ದಾಖಲೆಗಳ ಕೊರತೆಯಿಂದ 211 ಮಂದಿಗಳ ಸಾವನ್ನು  ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಮೇಲ್ಮನವಿ ಸಲ್ಲಿಸಿದ 1 ಸಾವುಗಳು ದೃಢೀಕರಿಸಲ್ಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 28,592ಕ್ಕೆ ಏರಿಕೆಯಾಗಿದೆ.

                   ಇಂದು, ಸೋಂಕು ಪತ್ತೆಯಾದವರಲ್ಲಿ 32 ಮಂದಿ ಜನರು ಹೊರ ರಾಜ್ಯದವರು. 8212 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 252 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  42 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,366 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1424, ಕೊಲ್ಲಂ 2262, ಪತ್ತನಂತಿಟ್ಟ 527, ಆಲಪ್ಪುಳ 395, ಕೊಟ್ಟಾಯಂ 801, ಇಡುಕ್ಕಿ 1376, ಎರ್ನಾಕುಳಂ 676, ತ್ರಿಶೂರ್ 1085, ಪಾಲಕ್ಕಾಡ್ 545, ಮಲಪ್ಪುರಂ 503, ಕೋಝಿಕ್ಕೋಡ್ 756, ವಯನಾಡ್ 357, ಕಣ್ಣೂರು 503, ಕಾಸರಗೋಡು 156 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 77,363 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 48,08,775 ಮಂದಿ ಜನರು ಕೋವಿಡ್‍ನಿಂದ ಮುಕ್ತರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries