HEALTH TIPS

ಬ್ಯಾಂಕ್ ಲಾಕರ್​ಗಳು ಇನ್ನಷ್ಟು ಸುರಕ್ಷಿತ; ಆರ್​ಬಿಐ ಹೊಸ ನಿಯಮ ಪ್ರಕಟ, ಗ್ರಾಹಕರು ಶುಲ್ಕದ ಮೊತ್ತ ಠೇವಣಿ ಇಡಬೇಕು..

               ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸೇಫ್ ಲಾಕರ್ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸೇಫ್ ಲಾಕರ್ ಕುರಿತಂತೆ ಗ್ರಾಹಕರ ದೂರು, ಬ್ಯಾಂಕ್​ಗಳು ಮತ್ತು ಭಾರತೀಯ ಬ್ಯಾಂಕ್​ಗಳ ಅಸೋಸಿಯೇಷನ್ (ಐಬಿಎ)ಗಳಿಂದ ಬಂದ ಪ್ರತಿಕ್ರಿಯೆ, ಬ್ಯಾಂಕಿಂಗ್ ಪ್ರಕ್ರಿಯೆ ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆ ಹಿನ್ನೆಲೆಯಲ್ಲಿ ಹೊಸ ನಿಯಮವನ್ನು ಆರ್​ಬಿಐ ಪರಿಷ್ಕರಿಸಿದೆ.

                                   ಬದಲಾವಣೆ ಏನು?

  •             ಲಾಕರ್​ಗಳನ್ನು ಹಂಚಿಕೆ ಮಾಡುವ ಸಮಯದಲ್ಲೇ ಅದಕ್ಕೆ ವಿಧಿಸುವ ಶುಲ್ಕವನ್ನು ಠೇವಣಿ ರೂಪದಲ್ಲಿ (ಅಡ್ವಾನ್ಸ್) ಸಂಗ್ರಹಿಸಬಹುದು. ಇದು ಮೂರು ವರ್ಷದ ಲಾಕರ್ ಬಾಡಿಗೆ ಮತ್ತು ನಿರ್ವಹಣಾ ಶುಲ್ಕವಾಗಿರುತ್ತದೆ. ಆದರೆ, ಈ ನಿಯಮವನ್ನು ಈಗಾಗಲೇ ಲಾಕರ್ ಹೊಂದಿರುವ ಮತ್ತು ಸಕ್ರಿಯವಾಗಿ ಖಾತೆ ನಿರ್ವಹಣೆ ಮಾಡುತ್ತಿರುವವರಿಂದ ಪಡೆಯುವಂತಿಲ್ಲ. ಸಕಾಲದಲ್ಲಿ ಲಾಕರ್ ಶುಲ್ಕ ಪಾವತಿ ಆಗದಿರುವ ಹಿನ್ನೆಲೆಯಲ್ಲಿ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
  •                ಲಾಕರ್​ಗಳಿಗೆ ಮುಂಗಡವಾಗಿ ಪಡೆದಂತಹ ಶುಲ್ಕವನ್ನು ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಬ್ಯಾಂಕ್​ಗಳು ಗ್ರಾಹಕರಿಗೆ ಹಿಂದುರುಗಿಸಬೇಕು.
  •              ಲಾಕರ್​ಗಳಿಗೆ ಬ್ಯಾಂಕ್ ಕಡೆಯಿಂದ ಉಂಟಾಗುವಂತಹ ಹಾನಿ, ನಷ್ಟದ ಸಂದರ್ಭದಲ್ಲಿ ಸಂಪೂರ್ಣ ಹೊಣೆ ಹೊರುವ ಅನುಮೋದಿತ ನೀತಿಗೆ ಬದ್ಧವಾಗಿರಬೇಕು.
  •            ಲಾಕರ್ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವ ಹಿಸುವುದನ್ನು ಬ್ಯಾಂಕ್​ಗಳು ಖಾತ್ರಿ ಪಡಿಸಬೇಕು. ಲಾಕರ್ ರೂಂಗಳಿಗೆ ಅನಧಿಕೃತ ಪ್ರವೇಶ ಇಲ್ಲದಂತೆ ಸುರಕ್ಷತೆ ನೀಡಬೇಕು. ದರೋಡೆ, ಕಳ್ಳತನ ಆಗದಂತೆ ಖಾತ್ರಿ ಒದಗಿಸುವುದೂ ಬ್ಯಾಂಕ್​ಗಳ ಜವಾಬ್ದಾರಿ.
  •                ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ (ಭೂಕಂಪನ, ಪ್ರವಾಹ ಇತ್ಯಾದಿ) ಲಾಕರ್​ಗಳಿಗೆ ಆಗುವ ಹಾನಿಗೆ ಬ್ಯಾಂಕ್​ಗಳು ಬಾಧ್ಯವಲ್ಲ. ಆದರೆ, ಇಂಥ ವಿಪತ್ತುಗಳಿಂದ ಸಂಪೂರ್ಣ ರಕ್ಷಣೆ ಪಡೆಯುವಂತಹ ಸೂಕ್ತ ಕ್ರಮಗಳನ್ನು ಬ್ಯಾಂಕ್​ಗಳು ಅಳವಡಿಸಿಕೊಂಡಿರುವುದು ಅವಶ್ಯಕ.
  •             ಗುಣಮಟ್ಟದ ದೋಷ ಅಥವಾ ಬ್ಯಾಂಕ್ ಸಿಬ್ಬಂದಿಯ ಅಚಾತುರ್ಯದಿಂದ ಆಗುವ ಬೆಂಕಿ ಅವಘಡ ಅಥವಾ ಕಟ್ಟಡ ಕುಸಿತದಿಂದಾಗುವ ಹಾನಿಗೆ ಲಾಕರ್​ಗಳಿಗೆ ವಿಧಿಸುವ ವಾರ್ಷಿಕ ಶುಲ್ಕದ ನೂರು ಪಟ್ಟು ಪರಿಹಾರವನ್ನು ಬ್ಯಾಂಕ್​ಗಳು ಕಟ್ಟಿಕೊಡಬೇಕು.
  •             ಅಪಾಯಕಾರಿ ವಸ್ತುಗಳನ್ನು ಲಾಕರ್​ನಲ್ಲಿ ಇಡುವಂತಿಲ್ಲ ಎಂಬ ನಿಬಂಧನೆಗೆ ಗ್ರಾಹಕರು ಬದ್ಧರಾಗಿರುವಂತಹ ಒಪ್ಪಂದವನ್ನು ಬ್ಯಾಂಕ್​ಗಳು ಮಾಡಿಕೊಳ್ಳಬೇಕು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries