HEALTH TIPS

ಸ್ವಪ್ನ ಸುರೇಶ್ ಳ ಕೋಫೆಪೋಸಾ ರದ್ದುಗೊಳಿಸಿದ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ

                     ಕೊಚ್ಚಿ: ರಾಜತಾಂತ್ರಿಕ ಬ್ಯಾಗ್ ಮೂಲಕ ಚಿನ್ನ ಕಳ್ಳಸಾಗಣೆ ಮಾಡಿ ಜೈಲಿನಲ್ಲಿದ್ದ ಸ್ವಪ್ನಾ ಸುರೇಶ್ ಅವರ ಕೋಫೆಪೋಸಾವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ ವಿಜಯಕುಮಾರ್, ಕೇಂದ್ರ ಸರ್ಕಾರದ ನ್ಯಾಯವಾದಿ ದಯಾಸಿಂಧು ಶ್ರೀಹರಿ, ಹಿರಿಯ ವಕೀಲ ಎಸ್ ಮನು, ಕೋಫೆಪೆÇೀಸಾ ನಿರ್ದೇಶಕರು ಮತ್ತು ಕಸ್ಟಮ್ಸ್ ನಿಯಂತ್ರಣ ಆಯುಕ್ತರನ್ನು ಒಳಗೊಂಡ ಸಮಿತಿಯು ಈ ನಿರ್ಧಾರವನ್ನು ಕೈಗೊಂಡಿದೆ.

             ಸ್ವಪ್ನಾಳ ಕೋಫೆಪೆÇೀಸಾ ದೂರಿನ ಜೈಲುವಾಸ ಇಂದಿಗೆ ಕೊನೆಗೊಳ್ಳುತ್ತಿರುವುದರಿಂದ ಕೇಂದ್ರ ಸರ್ಕಾರ ತಕ್ಷಣದ ಕ್ರಮದೊಂದಿಗೆ ಮುಂದುವರಿಯುತ್ತಿದೆ. ಸಮಿತಿಯ ಮೇಲ್ಮನವಿ ಶಿಫಾರಸನ್ನು ಈಗಾಗಲೇ ಕೇಂದ್ರ ಕಾನೂನು ಸಚಿವಾಲಯಕ್ಕೆ ರವಾನಿಸಲಾಗಿದೆ. ನವರಾತ್ರಿ ರಜಾದಿನದ ನಂತರ ಸುಪ್ರೀಂ ಕೋರ್ಟ್ ನ್ನು ಸಂಪರ್ಕಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

                  ನಿನ್ನೆ, ಹೈಕೋರ್ಟ್ ಸ್ವಪ್ನಳ ಕೋಫೆಪೆÇೀಸಾ ಜೈಲುವಾಸವನ್ನು ರದ್ದುಗೊಳಿಸಿತ್ತು. ನಿರಂತರ ಕಳ್ಳಸಾಗಣೆ ವಹಿವಾಟಿನಲ್ಲಿ ತೊಡಗಿರುವವರನ್ನು ಬಂಧಿಸುವ ಕಾನೂನನ್ನು ಸ್ವಪ್ನಾಳ ಮೇಲೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿತ್ತು. ಈ ಹಿಂದೆ ಅವರ ವಿರುದ್ಧ ಯಾವುದೇ ರೀತಿಯ ಪ್ರಕರಣಗಳಿಲ್ಲ ಎಂಬ ವಾದವನ್ನು ಒಪ್ಪಿಕೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

                    ಕೋಫೆಪೆÇೀಸಾ ಜೈಲುವಾಸ ಅವಧಿ ಮುಗಿದ ನಂತರವೂ ಎನ್.ಐ.ಎ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಮುಂದುವರಿದಿದ್ದರಿಂದ ಸ್ವಪ್ನಾಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಮೇ 26 ರಂದು ಎನ್ ಐ ಎ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಪರಿಗಣಿಸುತ್ತಿದೆ. ಇತರ ಪ್ರಕರಣಗಳಲ್ಲಿ ಜಾಮೀನು ನೀಡಲಾಗಿರುವುದರಿಂದ, ಎನ್ ಐ ಎ ಪ್ರಕರಣದಲ್ಲೂ ಜಾಮೀನು ನೀಡಿದರೆ ಸ್ವಪ್ನಾ ಜೈಲಿಂದ ಹೊರಬರುತ್ತಾಳೆ. 

                ಇದನ್ನು ತಪ್ಪಿಸಲು ಕೇಂದ್ರ ಏಜೆನ್ಸಿಗಳು ಪ್ರಯತ್ನಿಸುತ್ತಿವೆ. ಎನ್.ಐ.ಎ ಪ್ರಕರಣವನ್ನು ಹೈಕೋರ್ಟ್ ವಿಚಾರಣೆಗೆ ಮುನ್ನ, ಸುಪ್ರೀಂ ಕೋರ್ಟ್ ನಿಂದ ಸ್ವಪ್ನಾ ಸುರೇಶ್ ವಿರುದ್ಧದ ಮೇಲ್ಮನವಿಯಲ್ಲಿ ಅನುಕೂಲಕರ ತೀರ್ಪು ಪಡೆಯಲು ಕೋಫೆಪೆÇೀಸಾ ಪ್ರಯತ್ನಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries