ತಿರುವನಂತಪುರಂ: ರಾಜ್ಯದ ಜೈಲುಗಳಲ್ಲಿರುವ ಕೈದಿಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‍ಗಳನ್ನು ಬಳಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆರೆಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಸಮರ್ಥತೆಯ ಹಿನ್ನೆಲೆಯಲ್ಲಿ ಡ್ರೋನ್ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಈ ಯೋಜನೆಯನ್ನು ಪೂಜಾಪುರ, ವಿಯ್ಯೂರು ಮತ್ತು ಕಣ್ಣೂರು ಕೇಂದ್ರ ಕಾರಾಗೃಹಗಳಲ್ಲಿ ಮತ್ತು ಹೈ ಸೆಕ್ಯುರಿಟಿ ಜೈಲುಗಳಾದ ಕಾಸರಗೋಡಿನ ಚೀಮೇನಿ ಮತ್ತು ನೆಟ್ಟುಕಲ್ತೇರಿಯಲ್ಲಿ ಜಾರಿಗೊಳಿಸಲಾಗುವುದು.
ಭದ್ರತೆಯ ಭಾಗವಾಗಿ ಡ್ರೋನ್ ಕಣ್ಗಾವಲು ಕೂಡ ಅಳವಡಿಸಲಾಗುತ್ತಿದೆ. ಜೈಲಿನೊಳಗಿನ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‍ಗಳನ್ನು ಬಳಸಲಾಗುವುದು. ಜೈಲಿಗೆ ಪ್ರವೇಶಿಸುವವರನ್ನು ಪರೀಕ್ಷಿಸಲು ಬಾಡಿ ಸ್ಕ್ಯಾನರ್ ಅಳವಡಿಸುವ ಯೋಜನೆಯೂ ಇದೆ. ಪೆರೋಲ್ ಮುಗಿಸಿ ಹಿಂದಿರುಗಿದವರಲ್ಲಿ ಹಲವರು ಗಾಂಜಾ ಸೇರಿದಂತೆ ಮಾದಕ ವಸ್ತುಗಳೊಂದಿಗೆ ಜೈಲಿಗೆ ಹೋಗುತ್ತಾರೆ. ಇದನ್ನು ಸೆರೆಹಿಡಿಯಲು ಸ್ಕ್ಯಾನರ್ ಗಳನ್ನೂ ಅಳವಡಿಸಲಾಗಿದೆ.
ಕಾರಾಗೃಹಗಳ ಅಡಿಯಲ್ಲಿ ಗುಪ್ತಚರ ವ್ಯವಸ್ಥೆಯನ್ನು ಸ್ಥಾಪಿಸುವ ಯೋಜನೆಯೂ ಇದೆ. ಇದು ಕೈದಿಗಳು ತಮ್ಮ ಮೊಬೈಲ್ ಫೆÇೀನ್ ನ್ನು ಜೈಲಿನೊಳಗೆ ಬಳಸುವುದನ್ನು ತಡೆಯುತ್ತದೆ. 55 ಕಾರಾಗೃಹಗಳು ತಲಾ ಮೂರು ಜನರ ಗುಪ್ತಚರ ವ್ಯವಸ್ಥೆಯನ್ನು ಹೊಂದಿವೆ. ಜೈಲಿನ ಮುಖ್ಯಸ್ಥರು ಗೃಹ ಇಲಾಖೆಗೆ ವಿವರವಾದ ವರದಿಯನ್ನು ಸಲ್ಲಿಸುತ್ತಾರೆ.




