ಕೋಝಿಕ್ಕೋಡ್: ಆಟೋದಲ್ಲಿ ಸಾಕು ನಾಯಿಯನ್ನು ಎಳೆದೊಯ್ದು ಅಮಾನುಷವಾಗಿ ಹತ್ಯೆಗ್ಯೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪರಾಯಂಚೇರಿ ಮೂಲದ ಸಂತೋಷ್ ಕುಮಾರ್ ಬಂಧಿತ ವ್ಯಕ್ತಿ. ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಪೊಲೀಸರ ಕ್ರಮ ಕ್ಯೆಗೊಂಡರು.
ಅಕ್ಟೋಬರ್ 3 ರಂದು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ. ಪರಾಯಂಚೇರಿ ಚೆವಂಗೋಡು ಬೆಟ್ಟದ ರಸ್ತೆಯ ಮೂಲಕ ಹೋಗುತ್ತಿದ್ದ ಸಂತೋಷ್ ಎಂಬವ ಜಾಕಿ ಎಂಬ ತನ್ನ ಶ್ವಾನವನ್ನು ವಾಹನಕ್ಕೆ ಕಟ್ಟಿ ಅಮಾನುಷವಾಗಿ ಎಳೆದೊಯ್ದ. ಗಂಭೀರವಾಗಿ ಗಾಯಗೊಂಡ ನಾಯಿ ಅದೇ ದಿನ ಸಾವನ್ನಪ್ಪಿತು.
ಘಟನೆಯ ದೃಶ್ಯಾವಳಿಗಳು ಹೊರಬಂದ ತಕ್ಷಣ, ಸ್ಥಳೀಯರ ಸೂಚನೆಯಂತೆ ಸಮಾಧಿ ಮಾಡಿದ ನಾಯಿಯ ಶವವನ್ನು ಪೊಲೀಸರು ಹೊರತೆಗೆದು ಶವಪರೀಕ್ಷೆ ನಡೆಸಿದರು. ಸಂತೋಷ್ ಕುಮಾರ್ ಅವರನ್ನು ವೈದ್ಯಕೀಯ ಕಾಲೇಜು ಪೊಲೀಸರು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಬಂಧಿಸಿದ್ದಾರೆ.




