HEALTH TIPS

ಆನ್​ಲೈನ್​ ಕ್ಲಾಸ್​ ಫೋಟೋ ಪೋರ್ನ್​ ವೆಬ್​ಸೈಟ್​ನಲ್ಲಿ! ವಿದ್ಯಾರ್ಥಿ ಕೃತ್ಯಕ್ಕೆ ಬೆಚ್ಚಿಬಿದ್ದ ಟೀಚರ್, ವಿದ್ಯಾರ್ಥಿನಿಯರು

               ತಿರುವನಂತಪುರಂ: ವಯಸ್ಕರ ವೆಬ್​ಸೈಟ್​ನಲ್ಲಿ ಟೀಚರ್​ ಹಾಗೂ ಸಹಪಾಠಿಗಳ ವೈಯಕ್ತಿಕ ಮಾಹಿತಿಯನ್ನು ಶೇರ್​ ಮಾಡಿರುವ ಆರೋಪದ ಮೇಲೆ ಪಿಯು ವಿದ್ಯಾರ್ಥಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಸುಮಾರು ಒಂದು ತಿಂಗಳ ಸುದೀರ್ಘ ತನಿಖೆಯ ಬಳಿಕ ಆರೋಪಿ ವಿದ್ಯಾರ್ಥಿಯನ್ನು ತಿರುವನಂತಪುರಂನ ಶಾಲೆಯೊಂದರಲ್ಲಿ ಬಂಧಿಸಲಾಗಿದೆ.

            ಟೀಚರ್​ ಹಾಗೂ ಸಹಪಾಠಿಗಳ ಫೋನ್​ ನಂಬರ್​ ಮತ್ತು ಫೋಟೋಗಳನ್ನು ಕೆನಡಾ ಮೂಲದ ಪೋರ್ನ್​ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿ ಶೇರ್​ ಮಾಡಿದ್ದಾನೆ. ಆನ್​ಲೈನ್​ ಕ್ಲಾಸ್​ಗೆ ನೆರವಾಗಲೆಂದು ತೆರೆಯಲಾಗಿದ್ದ ವಾಟ್ಸ್​ಆಯಪ್​ ಗ್ರೂಪ್​ನಲ್ಲಿ ಫೋಟೋ ಮತ್ತು ಫೋನ್​ ನಂಬರ್​ಗಳನ್ನು ಆರೋಪಿ ವಿದ್ಯಾರ್ಥಿ ಸಂಗ್ರಹಿಸಿದ್ದ.

          ಉತ್ತರ ಭಾರತ ಮತ್ತು ವಿದೇಶಗಳಿಂದ ಫೋನ್​ ಕಾಲ್​ಗಳು ನಿರಂತರವಾಗಿ ಬರುವುದನ್ನು ನೋಡಿ ಆತಂಕಗೊಂಡ ವಿದ್ಯಾರ್ಥಿಗಳು ಮತ್ತು ಟೀಚರ್​ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಸೈಬರ್​ ಕ್ರೈಂ ಪೊಲೀಸರು ಅದೇ ಶಾಲೆಯ ಹುಡುಗನನ್ನು ಬಂಧಿಸಿದ್ದಾರೆ.

          ಪೋರ್ನ್​ ವೆಬ್​ಸೈಟ್​ನಲ್ಲಿ ಶೇರ್​ ಮಾಡಿರುವ ಫೋಟೋವೊಂದರಲ್ಲಿ ಸಹಪಾಠಿಗಳು ಮತ್ತು ಟೀಚರ್​ ಆನ್​ಲೈನ್​ ಕ್ಲಾಸ್​ನಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಪೊಲೀಸರು ಅದೇ ಶಾಲೆಯ ವಿದ್ಯಾರ್ಥಿ ಮಾಡಿರುವ ಕೃತ್ಯವಿದು ಎಂಬ ಅನುಮಾನ ಮೂಡಿತ್ತು. ಬಳಿಕ ಶಾಲಾ ವಿದ್ಯಾರ್ಥಿಗಳ ಮೊಬೈಲ್​ ಫೋನ್​ ಮತ್ತು ಇತರೆ ಗ್ಯಾಡ್ಜೆಟ್​ಗಳನ್ನು ಪರಿಶೀಲಿಸಿದಾಗ ಆರೋಪಿ ವಿದ್ಯಾರ್ಥಿಯ ಮೊಬೈಲ್​ನಲ್ಲಿ ಅಡಗಿದ್ದ ರಹಸ್ಯ ಬಯಲಾಗಿ ಸಿಕ್ಕಿಬಿದ್ದಿದ್ದಾನೆ.

               ಪೋರ್ನ್​ ವೆಬ್​ಸೈಟ್​ನಲ್ಲಿ ಅಪರಿಚತರೊಂದಿಗೆ ಚಾಟಿಂಗ್​ ಮಾಡುವಾಗ ತನ್ನನ್ನು ತಾನು ಪರಿಚಯ ಮಾಡಿಕೊಳ್ಳಲು ಆರೋಪಿ ವಿದ್ಯಾರ್ಥಿ ಆನ್​ಲೈನ್​ ಕ್ಲಾಸ್​ ಫೋಟೋವನ್ನು ಬಳಸಿಕೊಂಡಿದ್ದಾನೆ ಎಂದು ಕೇರಳ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಬಂಧಿತ ಹುಡುಗನಿಗೆ ಕೌನ್ಸಲಿಂಗ್​ ಕೊಡಿಸಲು ಕಳುಹಿಸಲಾಗಿದೆ. ಯಾವುದೇ ಸುರಕ್ಷತಾ ಶಿಷ್ಟಾಚಾರವನ್ನು ಪಾಲಿಸದೇ ಕಾರ್ಯಾಚರಣೆ ನಡೆಸುತ್ತಿರುವ ವೆಬ್​ಸೈಟ್​ ವಿರುದ್ಧವೂ ಕ್ರಮ ಜರುಗಿಸಲು ಸೈಬರ್​ ಪೊಲೀಸರು ಮುಂದಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries