HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಸ್ವಂತ ಆಕ್ಸಿಜನ್ ಪ್ಲಾಂಟ್-ಅವಲೋಕನ

              ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಕಾಸರಗೋಡು ಜಿಲ್ಲೆಯ ಚಟ್ಟಂಚಾಲಿನ ಉದ್ದಿಮೆ ಪಾರ್ಕ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಮುಕ್ತಾಯದ ಪ್ರಗತಿಯಲ್ಲಿದ್ದು, 1.87 ಕೋಟಿ ರೂ. ವೆಚ್ಚದಲ್ಲಿ ಪ್ಲಾಂಟನ್ನು ನಿರ್ಮಾಣವಾಗುತ್ತಿದೆ. 

             ಸ್ಥಳೀಯಾಡಳಿತ ಸಂಸ್ಥೆಗಳ ಜಂಟಿ ಯೋಜನೆಯಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೇತೃತ್ವದಲ್ಲಿ ಪ್ಲಾಂಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರತಿದಿನ 200 ಸಿಲಿಂಡರ್ ಆಕ್ಸಿಜನ್ ಉತ್ಪಾದಿಸುವ ಸಾಮಥ್ರ್ಯ ಹೊಂದಿರುವ ಪ್ಲಾಂಟ್ ಇದಾಗಿದೆ. ಚಟ್ಟಂಚಾಲ್ ನಲ್ಲಿರುವ ಜಿಲ್ಲಾ ಪಂಚಾಯಿತಿಯ 50 ಸೆಂಟ್ಸ್ ಜಾಗದಲ್ಲಿ ಈ ಘಟಕದ ನಿರ್ಮಾಣವಾಗಲಿದೆ. ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಲೆದೋರಿದ್ಧ ಆಕ್ಸಿಜನ್ ಮುಗ್ಗಟ್ಟಿಗೆ ಈ ಮೂಲಕ ಶಾಶ್ವತ ಪರಿಹಾರ ಲಭಿಸುವ ಭರವಸೆ ವ್ಯಕ್ತಪಡಿಸಲಾಗಿದೆ.  'ಜಿಲ್ಲೆಯಲ್ಲೇ ಒಂದು ಆಕ್ಸಿಜನ್ ಪ್ಲಾಂಟ್' ಎಂಬ ಆಶಯವನ್ನು ಜಿಲ್ಲಾಡಳಿತೆ ಜಾರಿಗೊಳಿಸುತ್ತಿದೆ. ಜಿಲ್ಲಾಪಂಚಾಯಿತಿ ಇದರ ನಿರ್ಮಾಣಕ್ಕೆ 50 ಲಕ್ಷ ರೂ. ನೀಡಿದ್ದು, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳು, ನಗರಸಭೆಗಳು ತಮ್ಮ ನಿಧಿಮೀಸಲಿರಿಸಿವೆ. ಕೇರಳದ ಹೊರ ಜಿಲ್ಲೆಗಳ ವಿವಿಧೆಡೆ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುತ್ತಿದ್ದು, ಕೊಚ್ಚಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇರ್ ಸಿಸ್ಟಂಸ್ ಕಾಸರಗೋಡಿನ ಪ್ಲಾಂಟ್ ನಿರ್ಮಾಣದ ಹೊಣೆ ವಹಿಸಿಕೊಂಡಿದೆ. ಚಟ್ಟಂಚಾಲಿನ ಉದ್ದಿಮೆ ಪಾರ್ಕ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲಾಂಟ್‍ನ ಕಾಮಗಾರಿಯನ್ನು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೇತೃತ್ವದ ತಂಡ ಅವಲೋಕನ ನಡೆಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries