ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ಸ್ಪಿಕ್‍ಮೆಕೆ ಚಿನ್ಮಯ ಚಾಪ್ಟರ್ ನವತಿಯಿಂದ ಪ್ರಸಿಧ್ಧ ಬೊಂಬೆಯಾಟ ನಿರ್ಮಾತೃ ಪೂನಾದ ಡಾಡಿ ಪುಡುಂಬ್ಜಿ ನೇತೃತ್ವದಲ್ಲಿ ಓನ್ ಲೈನ್ ಮೂಲಕ ಬೊಂಬೆಯಾಟ ಪ್ರದರ್ಶಿಸಲಾಯಿತು.
ಬೊಂಬೆಯಾಟದ ಬಳಿಕ ಡಾಡಿ ಪುಡುಂಬ್ಜಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ಕು| ಹರ್ಷಿಣಿ ಹರಿಹರನ್, ಅಶ್ವತಿ ಎಸ್ ಮೊದಲಾದವರು ಕಾರ್ಯಕ್ರಮದಲ್ಲಿ ಬೊಂಬೆಯಾಟದ ಬಗ್ಗೆ ಹಾಗೂ ಡಾಡಿ ಪುಡುಂಬ್ಚಿಯವರ ಕೊಡುಗೆಗಳ ಬಗ್ಗೆ ಮಾತನಾಡಿದರು.
ವಿದ್ಯಾಲಯ ಪ್ರಾಂಶುಪಾಲೆ ಸಂಗೀತ ಪ್ರಭಾಕರನ್, ಡೈರೆಕ್ಟರ್ ಬಿ. ಪುಷ್ಪರಾಜ್ , ಉಪ ಪ್ರಾಂಶುಪಾಲೆ ಪದ್ಮಾವತಿ ಪಿ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮ ಎಸ್.ಆರ್ ಸಿಂಧು ಶಶೀಂದ್ರನ್ ಬೋಧಕೇತರ ಸಿಬಂದಿ ಉಪಸ್ಥಿತರಿದ್ದರು. ಅನ್ವಿತ ಕಾಮತ್ ಪ್ರಾರ್ಥನೆ ಹಾಡಿದರು. ಮೀರ ಪದ್ಮನಾಭನ್ ಸ್ವಾಗತಿಸಿ, ಜಾನಿಯ ಮರಿಯ ವಂದಿಸಿದರು.




