ಕಾಸರಗೋಡು: ಬಿರುಸಿನ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ತೀವ್ರ ಜಾಗರೂಕತೆ ಪಾಲಿಸುವಂತೆ ಸಭೆ ತಿಳಿಸಿದೆ. ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.
ಮೊಗ್ರಾಲ್ ಪುತ್ತೂರು ಅಳಿವೆಯಲ್ಲಿ ನೆರೆ ಹಾವಳಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ನೀರಾವರಿ ಇಲಾಖೆಗೆ ಆದೇಶ ನೀಡಲಾಗಿದೆ. ಸದ್ರಿ ಎಲ್ಲ ತಾಲೂಕುಗಳಲ್ಲಿ ತುರ್ತಾಗಿ ಆನ್ ಲೈನ್ ರೂಪದಲ್ಲಿ ಐ.ಆರ್.ಎಸ್. ಸಭೆಗಳನ್ನು ನಡೆಸುವಂತೆ ಆದೇಶಿಸಲಾಗಿದೆ.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಪಂಚಾಯತ್, ನಗರಸಭೆಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಸಹಾಯಕ ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.
ನಿಯಂತ್ರಣ ಕೊಠಡಿಗಳು
ಬಿರುಸಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಗಳನ್ನು ಅಗತ್ಯದ ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಸಂಪರ್ಕಿಸಬಹುದು. ಅವುಗಳ ದೂರವಾಣಿ ಸಂಖ್ಯೆಗಳು ಇಂತಿವೆ:
ಕಾಸರಗೋಡು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ ನಿಯಂತ್ರಣ ಕೊಠಡಿ: 04994-257700. ಮೊಬೈಲ್: 9446601700.
ಕಾಸರಗೋಡು ತಾಲೂಕು : 04994-230021. ಮೊಬೈಲ್: 9447030021.
ಮಂಜೇಶ್ವರ ತಾಲೂಕು : 04998-244044. ಮೊಬೈಲ್: 8547618464.
ಹೊಸದುರ್ಗ ತಾಲೂಕು : 04672-204042. ಮೊಬೈಲ್ : 9447494042.
ವೆಳ್ಳರಿಕುಂಡ್ ತಾಲೂಕು : 04672-242320. ಮೊಬೈಲ್ : 8547618470.




