ನವದೆಹಲಿ: ಕರೊನಾ ಸೋಂಕಿತ ಮಕ್ಕಳು ಭವಿಷ್ಯದಲ್ಲಿ ವೈರಸ್ನ ಹೊಸ ಪ್ರಭೇದಗಳನ್ನು ಹರಡುವ ಸಾಧ್ಯತೆ ಹೆಚ್ಚಿದೆ. ಶಿಶುಗಳು, ಮಕ್ಕಳು ಮತ್ತು ಹದಿಹರೆಯದವರು ಸೋಂಕು ವಾಹಕರಾಗುವ ಸಂಭವವಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಮಕ್ಕಳ ಉಸಿರಾಟದಿಂದ ಹೊರಬರುವ ಕಣಗಳಲ್ಲಿ ಜೀವಂತ ಹಾಗೂ ರೂಪಾಂತರಿ ವೈರಾಣುಗಳು ಇರುವ ಸಾಧ್ಯತೆ ಇದೆ ಎಂದು 'ರ್ಜನಲ್ ಆ ಇನ್ೆಕ್ಷಸ್ ಡಿಸೀಸಸ್'ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ. ಕರೊನಾ ಮಹಾಮಾರಿಯನ್ನು ಸೋಲಿಸುವ ಹೋರಾಟದಲ್ಲಿ ಮಕ್ಕಳು ಮಹತ್ವದ ಭಾಗ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮಕ್ಕಳ ಸೋಂಕಿನ ಲಕ್ಷಣ ಸಹಿತ ಹಾಗೂ ಲಕ್ಷಣ ರಹಿತ ಈ ಎರಡೂ ವಿಭಾಗಗಳೂ ವೈರಸ್ ವಾಹಕಗಳಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಹೇಳಿದೆ. ಮೆಸಾಚುಯೆಟ್ಸ್ ಜನರಲ್ ಹಾಸ್ಪಿಟಲ್ (ಎಂಜಿಎಚ್), ಎಂಐಟಿ ಮತ್ತು ಹಾರ್ವರ್ಡ್ನ ವಿಮೆನ್ಸ್ ಹಾಸ್ಪಿಟಲ್, ರೇಗನ್ ಸಂಸ್ಥೆಗಳ ಸಂಶೋಧಕರು ಅಧ್ಯಯನ ನಡೆಸಿದ್ದರು.
ಹೊಸ ಕೇಸ್ ಇಳಿಕೆ: ಶುಕ್ರವಾರ ದೇಶದಲ್ಲಿ ಕರೊನಾ ಸೋಂಕಿನ 16,862 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಗುರುವಾರ ಪತ್ತೆಯಾದ 18,987 ಕೇಸ್ಗಿಂತ ಶೇಕಡ 11 ಕಡಿಮೆಯಾಗಿದೆ. ಈ ಅವಧಿಯಲ್ಲಿ ಕನಿಷ್ಠ 19,391 ಜನರು ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 3,33,82,100 ರೋಗಿಗಳು ಚೇತರಿಸಿಕೊಂಡಿದ್ದಾರೆ. ಶುಕ್ರವಾರದವರೆಗೆ 97.14 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಇನ್ನು ಎರಡು ದಿನದಲ್ಲಿ ನೂರು ಕೋಟಿ ಡೋಸ್ ಗಡಿ ದಾಟುವ ಸಂಭವವಿದೆ.
ಸಾಮುದಾಯಿಕ ಇಮ್ಯುನಿಟಿ ಸವಾಲು: ಕೋವಿಡ್ ವೈರಸ್ನ ಅಪಾಯ ಕಾರಿ ಪ್ರಭೇದವಾದ ಡೆಲ್ಟಾ ವಿರುದ್ಧ ಸಾಮುದಾಯಿಕ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ತುಂಬಾ ಕಡಿಮೆಯಿರುತ್ತದೆ ಎಂಬುದು ಸೋಂಕಿನ ಎರಡನೇ ಅಲೆ ವೇಳೆ ಕಂಡು ಬಂದಿದೆ. ಜೆನೊಮಿಕ್ ಮತ್ತು ಸಾಂಕ್ರಾಮಿರೋಗದ ದತ್ತಾಂಶಗಳ ಮಾದರಿಯನ್ನು ಬಳಸಿ ವಿಜ್ಞಾನಿಗಳ ಅಂತಾರಾಷ್ಟ್ರೀಯ ತಂಡ ಈ ಅಧ್ಯಯನ ನಡೆಸಿತ್ತು. 'ಸೈನ್ಸ್' ಪತ್ರಿಕೆಯಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ.
3ನೇ ಅಲೆ ತೀವ್ರವಾಗಿರದು ಕರೊನಾ ಮೂರನೇ ಅಲೆ ಮೊದಲೆರಡು ಅಲೆಗಳಷ್ಟು ತೀವ್ರವಾಗಿರದು ಎಂದು ಸಾರ್ವಜನಿಕ ಆರೋಗ್ಯದ ತಜ್ಞರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕೆಲವು ಪ್ರದೇಶಗಳಿಗೆ ಸೀಮಿತವಾಗಿ ಸೋಂಕು ಸ್ಫೋಟಗೊಳ್ಳಬಹುದು ಎಂದು ಭಾರತ ಸಾರ್ವಜನಿಕ ಆರೋಗ್ಯ ೌಂಡೇಷನ್ (ಪಿಎಚ್ಎಐ) ಅಧ್ಯಕ್ಷ ಕೆ. ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.




