HEALTH TIPS

ತೈಲ ದರ ಏರಿಕೆಯಿಂದ ಜಾಗತಿಕ ಆರ್ಥಿಕ ಪ್ರಗತಿ ಕುಂಠಿತ: ಭಾರತ ಎಚ್ಚರಿಕೆ

               ನವದೆಹಲಿವಿಶ್ವದ ಮೂರನೇ ಅತಿ ದೊಡ್ಡ ಇಂಧನ ಗ್ರಾಹಕ ರಾಷ್ಟ್ರವಾದ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದೆ. ಸೌದಿ ಹಾಗೂ ಇತರೆ ತೈಲ ಮಾರಾಟ ರಾಷ್ಟ್ರಗಳು ಸಮಾಲೋಚನೆ ನಡೆಸಿ ರೀಸನೆಬಲ್ ದರ ನಿಗದಿ ಪಡಿಸಲು ಭಾರತ ಸಲಹೆ ನೀಡಿದೆ.

           ಕೊರೊನಾದಿಂದ ಕುಸಿತ ಕಂಡಿರುವ ದೇಶಗಳ ಆರ್ಥಿಕತೆ ಈಗ ತಾನೆ ಚೇತರಿಕೆ ಹಾದಿಯಲ್ಲಿದೆ. ಆದರೆ ತೈಲ ದರ ಏರಿಕೆಯಿಂದ ಆರ್ಥಿಕ ಪ್ರಗತಿ ಕುಂಠಿತವಾಗಲಿದೆ ಎಂದು ಭಾರತ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ದಾಖಲೆ ಪ್ರಮಾಣದಷ್ಟು ಏರಿಕೆ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಆರ್ಥಿಕ ಚೇತರಿಕೆ ಕುಂಠಿತ ಗೊಳ್ಳಲಿದೆ ಎಂದು ಇಂಧನ ಸಚಿವ ಹರ್ ದೀಪ್ ಸಿಂಗ್ ಪುರಿ

            ಕಳೆದ ವರ್ಷ ಕೊರೊನಾದಿಂದಾಗಿ ಜಗತ್ತಿನೆಲ್ಲೆಡೆ ಲಾಕ್ ಡೌನ್ ಹೇರಿಕೆಯಾದಾಗ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ತೆಯಲ್ಲಿ ತೀವ್ರ ಕುಸಿತ ಕಂಡಿತ್ತು.

         ಲಾಕ್ ಡೌನ್ ನಿರ್ಬಂಧ ತೆಗೆದಾಗಿನಿಂದ ತೈಲ ಬೇಡಿಕೆ ಏಕಾಏಕಿ ಹೆಚ್ಚಿತ್ತು. ಆಗಿನಿಂದ ತೈಲ ದರ ಏರಿಕೆಯ ಹಾದಿಯಲ್ಲಿಯೇ ಇದೆ. 2020ರಲ್ಲಿ ಭಾರತದ ತೈಲ ಆಮದು ವೆಚ್ಚ 880 ಕೋಟಿ ಡಾಲರ್ ನಷ್ಟಿತ್ತು. ಈ ವರ್ಷ ಬೆಲೆ ಏರಿಕೆಯಿಂದಾಗಿ 2,400 ಕೋಟಿ ಡಾಲರ್ ತಲುಪಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries