HEALTH TIPS

ಕೆಎಎಸ್ ಫಲಿತಾಂಶ ಪ್ರಕಟ: ಸ್ತ್ರೀಯರದೇ ಮೇಲುಗೈ

              ತಿರುವನಂತಪುರಂ: ಕೇರಳ ಆಡಳಿತ ಸೇವೆ (ಕೆಎಎಸ್) ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.  ಎರಡನೇ ಗೆಜೆಟೆಡ್ ಹುದ್ದೆಗೆ 105 ಜನರನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಫಲಿತಾಂಶಗಳನ್ನು ಪಿಎಸ್‍ಸಿ ಅಧ್ಯಕ್ಷ ನ್ಯಾಯವಾದಿ. ಎಂ.ಕೆ ಜಾಕಿರ್ ಘೋಷಿಸಿದರು. ಪರೀಕ್ಷೆಯನ್ನು ಮೂರು ವಿಭಾಗಗಳಲ್ಲಿ ನಡೆಸಲಾಯಿತು. ಮಾಲಿನಿ ಎಸ್ ಮೊದಲ ಸ್ಟ್ರೀಮ್ ನಲ್ಲಿ ಪ್ರಥಮ ಸ್ಥಾನ ಗಳಿಸಿದರು. ನಂದನಾ ಎಸ್ ಪಿಳ್ಳೈ ಎರಡನೇ ಸ್ಥಾನ, ಗೋಪಿಕಾ ಉದಯನ್ ತೃತೀಯ, ಆದಿರಾ ಎಸ್‍ವಿ ನಾಲ್ಕನೇ ಮತ್ತು ಗೌತಮನ್ ಎಂ ಐದನೇ ಸ್ಥಾನ ಪಡೆದರು. ಮುಖ್ಯ ಪಟ್ಟಿಯಲ್ಲಿ 122 ಜನರಿದ್ದಾರೆ.

                  ಎರಡನೇ ಸ್ಟ್ರೀಮ್‍ನಲ್ಲಿ, ಅಖಿಲಾ ಚಾಕೊ, ಜಯಕೃಷ್ಣನ್ ಕೆಜಿ, ಪಾರ್ವತಿ ಚಂದ್ರನ್, ಲಿಬು ಎಸ್ ಲಾರೆನ್ಸ್ ಮತ್ತು ಜೋಶುವಾ ಬೆನೆಟ್ ಜಾನ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ಮೂರನೇ ಶ್ರೇಯಾಂಕಗಳನ್ನು ಪಡೆದರು. ಮುಖ್ಯ ಪಟ್ಟಿಯಲ್ಲಿ 70 ಜನರಿದ್ದಾರೆ. ಅನೂಪ್ ಕುಮಾರ್ ವಿ ಸ್ಟ್ರೀಮ್ ಮೂರರಲ್ಲಿ ಮೊದಲ ರ್ಯಾಂಕ್ ಪಡೆದಿರುವರು.  ಅಜೀಶ್ ಕೆ ಎರಡನೇ ರ್ಯಾಂಕ್, ಪ್ರಮೋದ್ ಜಿವಿ ಮೂರನೇ ರ್ಯಾಂಕ್, ಚಿತ್ರಲೇಖಾ ಕೆಕೆ ನಾಲ್ಕನೇ ರ್ಯಾಂಕ್ ಮತ್ತು ಸನೋಪ್ ಎಸ್ ಐದನೇ ರ್ಯಾಂಕ್ ಪಡೆದಿದ್ದಾರೆ.

                  ಕೆಎಎಸ್ ಪರೀಕ್ಷೆಗೆ ಅರ್ಹತೆ ಪಡೆದ 105 ಅಭ್ಯರ್ಥಿಗಳು ನವೆಂಬರ್ 1 ರಿಂದ ಕರ್ತವ್ಯಕ್ಕೆ ತೊಡಗಿಕೊಳ್ಳಲಿದ್ದಾರೆ. 200 ಅಂಕಗಳ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ನಂತರ, 582 ಅಭ್ಯರ್ಥಿಗಳು ಶಾರ್ಟ್‍ಲಿಸ್ಟ್‍ಗೆ ಪ್ರವೇಶ ಪಡೆದರು. ಮೊದಲ ವರ್ಗವು ನೇರ ಪ್ರವೇಶವಾಗಿದೆ. ಎರಡನೇ ವರ್ಗದಲ್ಲಿ ಗೆಜೆಟೆಡ್ ಅಲ್ಲದ ಉದ್ಯೋಗಿಗಳು ಮತ್ತು ಮೂರನೇ ವರ್ಗದಲ್ಲಿ ಗೆಜೆಟೆಡ್ ಉದ್ಯೋಗಿಗಳು ಇದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries