HEALTH TIPS

ಮಕ್ಕಳಿಗೆ ಲಸಿಕೆ ನೀಡಲು ಆತುರ ಬೇಡ : ತಜ್ಞರ ಸಲಹೆ

                 ನವದೆಹಲಿ: ನಿಖರವಾದ ಮಾಹಿತಿ ಮತ್ತುಸುರಕ್ಷತಾ ಭರವಸೆ ಇಲ್ಲದ ಹೊರತು ಮಕ್ಕಳಿಗೆ ಲಸಿಕೆ ಹಾಕಲು ಆತುರ ಬೇಡ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ದೇಶದಲ್ಲಿ ಅರ್ಹ ವಯಸ್ಕರಿಗೆ 100 ಕೋಟಿ ಕೋವಿಡ್ ಡೋಸ್‍ಗಳನ್ನು ನೀಡಿ, ಐತಿಹಾಸಿಕ ಸಾಧನೆ ಮಾಡಲಾಗಿದೆ. ಈ ನಡುವೆ ಮಕ್ಕಳಿಗೂ ಲಸಿಕೆ ನೀಡಲು ಸಾಕಷ್ಟು ತಯಾರಿಗಳು ನಡೆದಿವೆ.

          ಕೇಂದ್ರ ಸರ್ಕಾರದ ಔಷಧ ನಿಯಂತ್ರಣ ಪ್ರಾಕಾರದ ವಿಷಯ ತಜ್ಞರ ಸಮಿತಿ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡಲು ಅಕ್ಟೋಬರ್ 12ರಂದು ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಬಹಳಷ್ಟು ಮಂದಿ ಮಕ್ಕಳಿಗೆ ಲಸಿಕೆ ನೀಡಲು ಆತುರ ಬೇಡ ಎಂಬ ಸಲಹೆ ನೀಡಿದ್ದಾರೆ.

          ಈವರೆಗೆ ಲಭ್ಯ ಇರುವ ಪುರಾವೆಗಳ ಪ್ರಕಾರ ಮಕ್ಕಳ ಲಸಿಕೆಯಲ್ಲಿ ಅಲ್ಪಾವ ಸುರಕ್ಷೆ ಬಗ್ಗೆ ಖಚಿತತೆ ಇದೆ. ಆದರೆ ದೀರ್ಘಾವ ಸುರಕ್ಷತೆಯ ಬಗ್ಗೆ ಮಾಹಿತಿ ಇಲ್ಲ. ಸುರಕ್ಷತೆ ಖಾತ್ರಿಯಾಗದ ಹೊರತು ಯಾವುದೇ ರಾಜಿ ಬೇಡ. ಲಸಿಕೆ ನೀಡಲು ಆತುರ ಬೇಡ ಎಂದು ಸಾರ್ವಜನಿಕ ಆರೋಗ್ಯ ಫೌಂಡೇಷನ್ ಅಧ್ಯಕ್ಷ ಡಾ.ಕೆ.ಶ್ರೀಕಾಂತ್ ರೆಡ್ಡಿ ಹೇಳಿದ್ದಾರೆ.

          ವೆಲ್ಲೂರು ಕ್ರಿಶ್ಚಿಯನ್ ಕಾಲೇಜು ಪ್ರಾಧ್ಯಾಪಕರು ಹಾಗೂ ಲಸಿಕೆಯ ತಜ್ಞರಾದ ಡಾ.ಗಗನ್‍ದೀಪ್ ಕಂಗ್ ಅವರು, ಉತ್ತರ ಇಲ್ಲದ ಬಹಳಷ್ಟು ಪ್ರಶ್ನೆಗಳು ಉಳಿದಿವೆ. 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಮೊದಲು ಭಾರತ ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು, ಮಕ್ಕಳಿಗೆ ಯಾಕೆ ಮತ್ತು ಯಾವ ಲಸಿಕೆಯನ್ನು ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.

            ನಿಷ್ಕ್ರೀಯ ವೈರಾಣುಗಳ ಲಸಿಕೆ ನೀಡಬೇಕೆ ಅಥವಾ ಎಂಆರ್‍ಎನ್‍ಎ ಲಸಿಕೆಗಾಗಿ ಕಾಯಬೇಕೆ ಎಂಬುವು ಸೇರಿದಂತೆ ಅನೇಕ ಪ್ರಶ್ನೆಗಳಿವೆ. ಇವುಗಳಿಗೆ ನಿಖರ ಉತ್ತರ ಕಂಡುಕೊಳ್ಳಬೇಕು. ಈಗ ಲಭ್ಯ ಇರುವ ಲಸಿಕೆಯ ಸಾಮಥ್ರ್ಯ ಏನು ಎಂಬುದು ಸ್ಪಷ್ಟವಾಗಿಲ್ಲ. ಸಮರ್ಥನಿಯವಾದಷ್ಟು ಅಂಕಿ ಅಂಶಗಳು ಲಭ್ಯ ಇಲ್ಲದ ಹೊರತು ಲಸಿಕೆ ಹಾಕಲು ಆತುರ ಬೇಡ ಎಂದಿದ್ದಾರೆ ಎಂದು ಕಂಗ್ ಹೇಳಿದ್ದಾರೆ.

            ಗಂಭೀರ ಸ್ವರೂಪದ ಕೊರೊನಾ ಸೋಂಕು ತಗುಲಿದ ವಯಸ್ಕರಲ್ಲಿ ಗುಣಮುಖರಾದ ಬಳಿಕ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬಹುಅಂಗಾಂಗಗಳ ಮೇಲೆ ಪರಿಣಾಮ ಬೀರಿರುವ ಉದಾಹರಣೆ ಇದೆ. ಆದರೆ ಮಕ್ಕಳಲ್ಲಿ ಕೋವಿಡ್ ಸೋಂಕು ದೀರ್ಘಾವಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಮಕ್ಕಳ ಅಂಗಾಂಗಗಳ ಮೇಲೆ ಪರಿಣಾಮ ಬೀರಲಿದೆಯೇ ಇಲ್ಲವೆ ಎಂಬುದೂ ಗೋತ್ತಾಗಿಲ್ಲ. ಈ ಬಗ್ಗೆ ಅಗತ್ಯ ಸಂಶೋಧನೆಗಳು ನಡೆಯಬೇಕಿದೆ ಎಂದು ಐಸಿಎಂಆರ್‍ನ ನಿವೃತ್ತ ವಿಜ್ಞಾನಿ ಡಾ.ರಮಣ ಗಂಗಖೇದಾರ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries