HEALTH TIPS

ಫೇಸ್​​ಬುಕ್​, ವಾಟ್ಸ್​​ಆಯಪ್​, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​​ನಿಂದ ಜಗತ್ತಿನ ಆರ್ಥಿಕತೆಗೆ ಒಂದು ಗಂಟೆಯಲ್ಲಾದ ನಷ್ಟವೆಷ್ಟು ಗೊತ್ತೇ?

            ಡಿಜಿಟಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಭಾಗವನ್ನೇ ಹೊಂದಿರುವ ಫೇಸ್​ಬುಕ್​, ವಾಟ್ಸ್​ಆಯಪ್​ ಹಾಗೂ ಇನ್​ಸ್ಟಾಗ್ರಾಮ್​ ಸರ್ವರ್​ ಇದ್ದಕ್ಕಿದ್ದಂತೆ ಕೈಕೊಟ್ಟಿರುವುದರಿಂದ ಬರೀ ಸಂವಹನದಲ್ಲಷ್ಟೇ ವ್ಯತ್ಯಯವಾಗಿರುವುದಲ್ಲ. ಜತೆಗೆ ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದೆ.


               ಗಂಟೆಗೂ ಹೆಚ್ಚು ಕಾಲದಿಂದ ಈ ಮೂರೂ ಆಯಪ್​ಗಳಿಗೆ ಸಂಬಂಧಿಸಿದಂತೆ ಸರ್ವರ್​ ಡೌನ್​ ಆಗಿದ್ದು, ಪರ್ಸನಲ್​ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್​ ಎರಡೂ ಸಾಧ್ಯವಾಗುತ್ತಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್​ ಬಳಕೆದಾರರು ಟ್ವಿಟರ್​, ಟೆಲಿಗ್ರಾಂ ಹಾಗೂ ಸಿಗ್ನಲ್​ಗೆ ಮೊರೆ ಹೋಗಿದ್ದಾರೆ.

        ಈ ನಡುವೆ ನೆಟ್​ಬ್ಲಾಕ್ಸ್​ನ ದ ಕಾಸ್ಟ್​ ಆಫ್​ ಶಟ್​ಡೌನ್​ ಟೂಲ್​ (COST) ಫೇಸ್​ಬುಕ್​, ವಾಟ್ಸ್​ಆಯಪ್​, ಇನ್​ಸ್ಟಾಗ್ರಾಮ್​ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್​ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್​ ಡಾಲರ್ ನಷ್ಟ ಆಗುತ್ತಿದೆ. ಇದು ಇನ್ನೂ ಮುಂದುರಿಯುತ್ತಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್​​ಬುಕ್​ನ ಷೇರು ಕೂಡ ಶೇ. 6 ಕುಸಿದಿದೆ.

         ತಮ್ಮ ಸರ್ವರ್​ ಡೌನ್​ ಆಗಿರುವುದನ್ನು ಟ್ವಿಟರ್​ ಮೂಲಕ ಹೇಳಿಕೊಂಡಿರುವ ಫೇಸ್​ಬುಕ್​, ಅದಕ್ಕಾಗಿ ಬಳಕೆದಾರರ ಕ್ಷಮೆಯನ್ನೂ ಕೋರಿದೆ. ಆದರೆ ಸರ್ವರ್​ ಡೌನ್​ಗೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ನಿಜವಾಗಿಯೂ ಸರ್ವರ್​ ಡೌನ್​ ಆಗಿದೆಯೇ ಅಥವಾ ಏನಾದರೂ ಹ್ಯಾಕ್​ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries